ಪ್ರಾಚೀನ ಶ್ರೇಷ್ಠ ಕಲಿಯಾದ ಗಮಕ ಸಾಹಿತ್ಯ ದ ಮಹತ್ವವನ್ನು ಇವತ್ತು ಜನರಿಗೆ, ವಿದ್ಯಾರ್ಥಿ ಗಳಿಗೆ ತಲುಪಿಸುವ ಕ್ರಮದ ಬಗ್ಗೆ ಕನ್ನಡ ಪರ ಹೋರಾಟ ಸಂಘಟನೆಗಳು ಮತ್ತು ಸಾಹಿತ್ಯ ಪ್ರೇಮಿಗಳು ತಮ್ಮನ್ನು ಕಾಳಜಿಯಿಂದ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಹೆಚ್ಚಾಗಿದೆಎಂದು ನಿವೃತ್ತ ಪ್ರಾಶುಪಾಲ ಪ್ರೊ. ಎಸ್. ಬಿ. ಶಂಕರೇ ಗೌಡ ಅಭಿಪ್ರಾಯಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ. ವಿ. ಶಂಕರೇಗೌಡ ಸಭಾಂಗಣ ದಲ್ಲಿ ಹಿರಿಯ ಗಮಕಿ ಗಾಯಕ ಕಲಾಶ್ರೀ ವಿದ್ಯಾಶಂಕರ್ ನೇತೃತ್ವದ ಶ್ರೀ ರಂಜಿನಿ ಕಲಾವೇದಿಕೆ, ಕರ್ನಾಟಕ ಸಂಘ, ಪುತಿನ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಎಲ್ಲರೂಳಗೊಂದಾಗೂ, ಮಂಕುತಿಮ್ಮ ಟ್ರಸ್ಟ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ವಿಶಿಷ್ಟ ಕಾವ್ಯಗಳ ಗಮಕ ಸಂಭ್ರಮ ಕಾರ್ಯಕ್ರಮ ದ ಸಮಾರೋಪ ಭಾಷಣ ದಲ್ಲಿ ಅಭಿಪ್ರಾಯಿಸಿದರು.
ಕರ್ನಾಟಕದ ಸಾಹಿತ್ಯ ಸಂಪತ್ತು, ಸಂಸ್ಕೃತಿ ಅತ್ಯಂತ ಶ್ರೇಷ್ಠ ವಾಗಿದ್ದು ಗಮಕ ಕಲೆಯ ಮೂಲಕ ಸಾಹಿತ್ಯದ ಸೊಬಗು, ಮಹತ್ವದ ಕುರಿತು ಎಲ್ಲರನ್ನು ತಲುಪಿ ಎಲ್ಲಸ್ರು ಕನ್ನಡ ಭಾಷೆಯ ಬಗ್ಗೆ ಜಾಗೃತಿ, ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ. ಮುಂದುವರಿದ ತಾಂತ್ರಿಕ ಯುಗದಲ್ಲಿ ಓದುವ, ಆಲಿಸುವ ಆಸ್ವಾದಿಸುವ.ಪ್ರವೃತ್ತಿ, ತಾಳ್ಮೆ ಇಂದಿನ ಯುವ ಜನಾಂಗಕ್ಕೆ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ ಎಂದು ಬೇಸರಿಸಿದ ಅವರು ಇದನ್ನು ಹೋಗಲಾಡಿಸಲು ಮನೆ ಮನೆಗಳ್ಳಲ್ಲಿ ಗಮಕ, ಹಾಗೂ ಸಾಹಿತ್ಯ ಸಂಬಂಧಿತ ಕಾರ್ಯಕ್ರಮ ಗಳನ್ನು ಆಯೋಜಿಸಿ ಪೋಷಕರನ್ನು ಮತ್ತು ವಿದ್ಯಾರ್ಥಿ ಗಳಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ ಯ ಕಾಳಜಿ ಮೆಚ್ಚುವಂತದ್ದು ಇಂತಹ ಕಾರ್ಯಕ್ರಮ ಗಳಿಗೆ ಕರ್ನಾಟಕ ಸಂಘ ಒತ್ತಾಸೆ ಯಾಗಿ ನಿಲ್ಲ ಲಿದೆ ಎಂದರು.
ಸಮಾರಂಭ ದ ಅಧ್ಯಕ್ಷತೆಯನ್ನು ಜೈ ಕರ್ನಾಟಕ ಪರಿಷತ್ ನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಗಮಕಿ ವ್ಯಾಖ್ಯಾನ ಕಾರ ಡಾ. ಕೃ. ಪಾ. ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು. ನಾರಾಯಣ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




