ಚನ್ನಪಟ್ಟಣದ ಬಿಐಎ ನೀಟ್ ಅಕಾಡೆಮಿಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲವಾಗಲೆಂದು ಶೇ ೯೦ರಷ್ಟು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೇವಲ ೧ ರೂ ಗೆ ನೀಟ್ ರಿಪೀಟರ್ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅಕಾಡೆಮಿಯ ನಿರ್ದೇಶಕ ಡಾ.ಸಿ.ಶಿವರಾಜ್ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ತರಬೇತಿ ನೀಡುವ ಉದ್ದೇಶದಿಂದ ಸಂಸ್ಥೆ ವತಿಯಿಂದ ಸದಾವಕಾಶವನ್ನು ನೀಡಲಾಗುತ್ತಿದೆ ಎಂದರು.

ಈ ಅನುಕೂಲ ಪಡೆಯಲು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ೭೨೦ ಕ್ಕೆ ೪೦೦ಕ್ಕೂ ಹೆಚ್ಚು ಅಂಕಗಳಿಸಬೇಕು, ದ್ವಿತೀಯ ಪಿಯುಸಿ ಹಾಗೂ ಸಿಬಿಎಸ್ಸಿ ೧೨ನೇ ತರಗತಿಯಲ್ಲಿ ಶೇ ೯೦ಕ್ಕೂ ಹೆಚ್ಚು ಅಂಕಗಳಿಸಬೇಕಾಗಿರುತ್ತದೆ. ಹೀಗೆ ಅಂಕಗಳಿಸಿದ ೧೦೦ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿರಲಿದೆ ಎಂದು ಹೇಳಿದರು.
ಅಂಕ ಸಂಬಂಧ ಮಾನದಂಡಗಳನ್ನು ಪೂರೈಸದ ವಿದ್ಯಾರ್ಥಿಗಳಿಗೆ ತರಬೇತಿ, ಊಟ, ವಸತಿ ಸೇರಿದಂತೆ ೨ ಲಕ್ಷ ರೂಗಳ ಶುಲ್ಕವಿದ್ದು, ವಿದ್ಯಾರ್ಥಿ ವೇತನ ಪಡೆಯಲು ಅವಕಾಶವಿರುತ್ತದೆ. ಅದಕ್ಕಾಗಿ ಸಂಸ್ಥೆ ವತಿಯಿಂದ ೫೦ ಪ್ರಶ್ನೆಗಳ ಪರೀಕ್ಷೆ ನಡೆಸಲಿದ್ದು, ಉತ್ತೀರ್ಣರಾದವರಿಗೆ ರಿಯಾಯಿತಿ ನೀಡಲಾಗುತ್ತದೆ. ತರಗತಿಗಳು ಬೆಳಿಗ್ಗೆ ೦೯ರಿಂದ ಸಂಜೆ ೦೫ರವರೆಗೆ ನಡೆಯಲಿದ್ದು, ಪ್ರವೇಶ ಪಡೆಯಲು ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ೭೨೦೪೦೪೫೧೫೧, ೭೨೦೪೦೫೫೧೫೧ಗೆ ಸಂಪರ್ಕಿಸಿ ಅಥವಾ www.biapuc.com ಗೆ ಭೇಟಿ ನೀಡಬಹುದಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರಾಶುಪಾಲರಾದ ಚಂದ್ರಿಕ, ಪ್ರಾಂಶುಪಾಲ ಮಹದೇಶ್ವರ್‌ರಾವ್ ಇದ್ದರು.




