Monday, November 23, 2026

ಪ್ರಾಯೋಗಿಕ ಆವೃತ್ತಿ

ಮನೆಗಳ್ಳರ ಬಂಧನ ; 18.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮಂಡ್ಯ ನಗರ ಮತ್ತು ಇತರೆ ಕಡೆಗಳಲ್ಲಿ ಮನೆ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಡ್ಯ ಪೊಲೀಸರು ಅವರಿಂದ 18.20 ಲಕ್ಷ ರೂ. ಮೌಲ್ಯದ 182 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನರಸಿಂಹತಿಟ್ಟು ಎಂಬಲ್ಲಿ ವಾಸವಾಗಿದ್ದ ಗೋಪಿಕೃಷ್ಣ ಅಲಿಯಾಸ್ ಗೋಪಿ, ಬಿನ್ ಲೇಟ್ ರಾಮಲಿಂಗಸ್ವಾಮಿ ( 49ವರ್ಷ) ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ಸುರೇಶ್ ಎಸ್.ಕೆ ಹಾಗೂ ಆರ್.ಎಕ್ಸ್ ಸೂರಿ ಬಿನ್ ಕರಿಯಪ್ಪ ಬಂಧಿತ ಆರೋಪಿಗಳು.

ಕಳ್ಳತನ ಪ್ರಕರಣಗಳ ಪತ್ತೆಗಾಗಿ ಮಂಡ್ಯ ಉಪವಿಭಾಗ ಡಿ.ವೈ.ಎಸ್.ಪಿ. ಹೆಚ್.ಲಕ್ಷ್ಮೀ ನಾರಾಯಣ ಪ್ರಸಾದ್ ನೇತೃತ್ವದಲ್ಲಿ ಪ್ರಭಾರ ನಗರ ವೃತ್ತ ನಿರೀಕ್ಷಕ ನವೀನ್ ಸುಪೇಕರ್, ಪಿಎಸ್ಐ ಶೇಷಾದ್ರಿ ಕುಮಾರ ಎಸ್.ಜಿ., ಹಾಗೂ ಕ್ರೈಂ ಪಿ.ಎಸ್.ಐ ವೆಂಕಟೇಶ್ ಬಿ.ಎಸ್, ಪೂರ್ವ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಎ.ಎಸ್.ಐ. ಟಿ.ಲಿಂಗರಾಜು. ಸಿಹೆಚ್‌ಸಿ ಯವರಾದ ಉಮರ್ ಅಹಮದ್ ಫಾರೂಖಿ, ಅನಿಲ್ ಕುಮಾರ್, ಒಬೇದುಲ್ಲಾ ಖಾನ್, ದಕ್ಷಿಣ ಮೂರ್ತಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಯವರುಗಳಾದ ಮಂಜುನಾಥ, ಪ್ರಭುಸ್ವಾಮಿ, ಸಿ.ಪಿ.ಸಿ ಕುಮಾರ್, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಮಹೇಶ್ ಮತ್ತು ಎಪಿಸಿ ಕೃಷ್ಣ, ಸಿಹೆಚ್‌ಸಿ ಲೋಕೇಶ್ ಹಾಗೂ ರವಿಕಿರಣ್ ರವರನ್ನೊಳಗೊಂಡ ರಚಿಸಲಾಗಿತ್ತು.

ಈ ತಂಡವು ಕಾರ್ಯಾಚರಣೆ ನಡೆಸಿ ಒಟ್ಟು ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಮಂಡ್ಯ ಪೂರ್ವ/ಪಶ್ಚಿಮ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ