Tuesday, November 24, 2026

ಪ್ರಾಯೋಗಿಕ ಆವೃತ್ತಿ

ಬಾಲಕನಿಗೆ ಬೆಳವಣಿಗೆ ಸಮಸ್ಯೆ : ಆರ್ಥಿಕ ಸಹಾಯಕ್ಕೆ ಪೋಷಕರ ಮನವಿ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಮಗು ಪ್ರೆಯಶ್ ಗೌಡ ಹುಟ್ಟಿನಿಂದ ಬೆಳವಣಿಗೆ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯೋಪಚಾರದ ನೆರವಿಗೆ ದಾನಿಗಳು ಉದಾರವಾಗಿ  ಸಹಾಯಾಸ್ತ ಚಾಚುವಂತೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಕಾರ್ಯಕರ್ತೆ ನಾಗರತ್ನ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗುವಿನ ಬೆಳವಣಿಗೆ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೋರಿಸಲಾಗಿ, ಚುಚ್ಚುಮದ್ದಿನಿಂದ ಸಮಸ್ಯೆಗೆ ಪರಿಹಾರವಾಗುವುದೆಂದು ತಿಳಿಸಿದ್ದು, ಅದರಂತೆ ನಿರಂತರವಾಗಿ ಚುಚ್ಚುಮದ್ದು ನೀಡಲಾಗುತ್ತದೆ ಎಂದರು.

ಈಗ ೧೦ ವರ್ಷ ತುಂಬಿದ ಪ್ರೆಯಸ್ ಗೌಡಗೆ ೨೦ ವರ್ಷಗಳು ತುಂಬುವವರೆಗೂ ಪ್ರತಿನಿತ್ಯ ಚುಚ್ಚು ಮದ್ದು ನೀಡುವಂತೆ ವೈದ್ಯರು ಸಲಹೆ ನೀಡಿದ್ದು, ಒಂದು ತಿಂಗಳಿಗಾಗುವ ಚುಚ್ಚು ಮದ್ದು ೫ ಸಾವಿರ ರೂ. ಇದ್ದು , ಈಗ ೧೧ ಸಾವಿರ ರೂ. ಗಳಿಗೆ ಏರಿಕೆಯಾಗಿದೆ. ಮಗುವಿನ ಹಾರೈಕೆ ಮಾಡುತ್ತಿರುವ ಹಾಲಹಳ್ಳಿ ಗ್ರಾಮದ ಅಜ್ಜಿ ಸರಿತ ಅವರಿಗೆ ಆರ್ಥಿಕ ಸಂಕಷ್ಟಕ್ಕೆದುರಾಗಿದ್ದು, ಸಹಾಯಕ್ಕೆ ನೀಡಬೇಕೆಂದು ಮನವಿ ಮಾಡಿದರು.

ಸರ್ಕಾರದ ಯಾವುದೇ ಆಸ್ಪತ್ರೆಯಲ್ಲಿ ಚುಚ್ಚುಮದ್ದು ದೊರೆಯದಿರುವುದರಿಂದ, ಹೊರದೇಶದಿಂದ ತರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ಸ್ವ ಸಹಾಯ ಸಂಘದಿಂದ ೫ ತಿಂಗಳಿಗಾಗುವಷ್ಟು ಸಹಾಯ ಮಾಡಿದ್ದು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು.

ಸಹಾಯಾಸ್ತ ಚಾಚುವ ದಾನಿಗಳು PREYASH GOWDA C M ಮಗುವಿನ ಖಾತೆ ಸಂಖ್ಯೆ: 12305100156240, IFSC CODE: PKGB0012305 ಗೆ ಸಹಾಯ ಮಾಡಲು ಕೋರಿದರು.

ಗೋಷ್ಠಿಯಲ್ಲಿ ಮಗು ಪ್ರೆಯಶ್ ಗೌಡ, ಮಗುವಿನ ಅಜ್ಜಿ ಸರಿತ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ