Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿಯನ್ನು ಗೆಲ್ಲಿಸಲು ಚುನಾವಣಾ ಆಯೋಗ ಎಂತಹ ದುಸ್ಸಾಹಸಕ್ಕೂ ಕೈ ಹಾಕಲಿದೆ ; ದಿನೇಶ್ ಗುಂಡೂರಾವ್

ಚುನಾವಣಾ ಆಯೋಗ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಅಕ್ರಮ ನಡೆಸಿರುವುದು ನೂರಕ್ಕೆ ನೂರರಷ್ಟು ಸತ್ಯ. ರಾಹುಲ್ ಗಾಂಧಿಯವರು ಆಧಾರವಿಲ್ಲದೆ ಆರೋಪ ಮಾಡುವವರಲ್ಲ. ಅದೃಶ್ಯ ಮತದಾರರನ್ನು ಸೇರಿಸುವ ಅಸಾಮಾನ್ಯ ಕಲೆಯನ್ನು ಚು.ಆಯೋಗ ಸಿದ್ದಿಸಿಕೊಂಡಿದೆ‌ ಎಂದು ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ನಡುವಿನ ಅಂತರದಲ್ಲಿ ಲಕ್ಷಾಂತರ ಮತದಾರರು ಸೇರ್ಪಡೆಯಾಗಿದ್ದರು. ಈ ಅದೃಶ್ಯ ಮತದಾರರು ಯಾರು ಎಂಬ ಪ್ರಶ್ನೆಗೆ ಆಯೋಗ ಇಲ್ಲಿಯವರೆಗೂ ಸಮರ್ಪಕ ಉತ್ತರ ನೀಡಿಲ್ಲ. ಅದೇ ರೀತಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲೂ ಮತ ಅಕ್ರಮ ನಡೆಸಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

“>

 

ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಬಗ್ಗೆ ಜನರ ಒಲವೇ ಇರಲಿಲ್ಲ. ಆದರೂ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಚ್ಚರಿಯ ಫಲಿತಾಂಶ ಬಂದಿತ್ತು‌‌. ಈ ಅಚ್ಚರಿಯ ಫಲಿತಾಂಶದ ಹಿಂದಿನ ಕಾಣದ ಕೈ ಚು.ಆಯೋಗ ಎಂಬ ರಾಹುಲ್ ಗಾಂದಿಯವರ ಆರೋಪದಲ್ಲಿ ಅನುಮಾನವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮುಕ್ತ,ನಿರ್ಭೀತ,ನ್ಯಾಯಸಮ್ಮತ ಹಾಗೂ ಪಾರದರ್ಶಕತೆ ಎಂಬ ಆಯೋಗದ ಘೋಷಣೆ ಇತ್ತೀಚೆಗೆ ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಆಯೋಗ ಎಂತಹ ದುಸ್ಸಾಹಸಕ್ಕೂ ಬೇಕಾದರೂ ಕೈ ಹಾಕಲಿದೆ. ಆಯೋಗವೇ ಅಕ್ರಮದ ಮೂಟೆಯಾಗಿರುವಾಗ ಚುನಾವಣೆ ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ನಡೆಯಲು ಸಾಧ್ಯವೇ.? ಎಂದು ಪ್ರಶ್ನಿಸಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ