ಮಳವಳ್ಳಿ ತಾಲ್ಲೂಕಿನ ಹಿಟ್ಟಿನಹಳ್ಳಿಕೊಪ್ಪಲು ಗ್ರಾಮದ ರಾಮಮಂದಿರ ಸೇವಾ ಸಮಿತಿ ವತಿಯಿಂದ ಶ್ರೀ ರಾಮಮಂದಿರ ಮತ್ತು ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಮಹೋತ್ಸವವನ್ನು ಆ.1ರ ಬೆಳಿಗ್ಗೆ 10ಕ್ಕೆ ಗ್ರಾಮದ ರಾಮಮಂದಿರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳ ಹಿಂದೆಯೇ ಅಡಿಪಾಯ ಕಂಡ ರಾಮರ ದೇವಾಲಯವನ್ನು ಸುಮಾರು 50 ಲಕ್ಷ ರೂ ಗಳ ವೆಚ್ಚದಲ್ಲಿ ಪೂರ್ಣಗೊಳಿಸಿದ್ದು, ದೇವರುಗಳ ವಿಗ್ರಹಕ್ಕೆ 6.5 ಲಕ್ಷ ಹಾಗೂ ಅಲ್ಲಿಯೇ ಇದ್ದ ಕೊಳಕ್ಕೆ ಕಲ್ಯಾಣಿ ರೂಪ ನೀಡಲು 25 ಲಕ್ಷ ರೂ ವ್ಯಯಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಜುಲೈ 30, 31ರಂದು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು.

ದಿವ್ಯಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮಿ, ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದನಾಥಸ್ವಾಮಿ, ವಿಶ್ವಮಾನವ ಕ್ಷೇತ್ರದ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮಿಗಳು ವಹಿಸಲಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಮಾನ ಗೋಪುರದ ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ನಾರಾಯಣ್ ಅವರು ನವಗ್ರಹ ದೇವತೆಗಳ ಪುಷ್ಪಾರ್ಚನೆ ಮಾಡುವರು. ಮಾಜಿ ಸಂಸದೆ ಸುಮಲತಾ ಅಂಬರೀಷ್ ಕಲ್ಯಾಣಿಗೆ ಪುಷ್ಪಾರ್ಚನೆ ಮಾಡಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ರಾಮಮಂದಿರ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಮಂಚಯ್ಯ ಪ್ರಾಸ್ತಾವಿಕವಾಗಿ ನುಡಿಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕಿ ನಾಗಮಣಿ ನಾಗೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಖ್ಯಾತ ನಟ ಅಭಿಷೇಕ್ ಅಂಬರೀಷ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದು, ರಾಮನಗರ ಬೆಸ್ಕಾಂ ಇಇ ಹೆಚ್.ಎಂ.ನಾಗರಾಜು, ಹಿಟ್ಟಿನಕೊಪ್ಪಲು ಗ್ರಾಮದಲ್ಲಿ ಪಟೇಲ್ ಚಿಕ್ಕಮೂಗೇಗೌಡ, ಗ್ರಾಮದ ಸರ್ವೇಯರ್ ಕೃಷ್ಣಕುಮಾರ್, ಬೆಂಗಳೂರಿನ ರೆವೆನ್ಯೂ ನಿರೀಕ್ಷಕ ಕುಮಾರಸ್ವಾಮಿ, ಕೆ.ಹೆಚ್.ಬಿಯ ಹೆಚ್.ಕೆ.ಪುಟ್ಟಯ್ಯ ಅವರನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸನ್ಮಾನಿಸುವರು ಎಂದು ವಿವರಿಸಿದರು.
ಗೋಷ್ಠೀಯಲ್ಲಿ ರಾಮಮಂದಿರ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಮAಚಯ್ಯ, ಹೆಚ್.ಎಂ.ಯೋಗೇಶ್, ಎಂ.ಸಿ.ಬಾಲರಾಜು ಇದ್ದರು.




