ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಬದುಕಿಗೆ ಅಗತ್ಯವಾಗಿದೆ. ಇಂಥ ಪ್ರವಾಸಗಳಿಂದ ಹೊಸತನ್ನು ಕಲಿಯುವ ಮೂಲಕ ಹೊಸ ಅನುಭವ ಪಡೆಯಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಡ್ಯ ನಗರದ ಹೊರವಲಯದ ರಿಪಬ್ಲಿಕ್ ಎಜುಕೇಷನ್ ಟ್ರಸ್ಟ್ನಿಂದ ೪ನೇ ಬಾರಿಗೆ ಜಪಾನ್‌ನಲ್ಲಿ ನಡೆಯುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಬದುಕಿಗೆ ಅಗತ್ಯವಾಗಿದೆ. ಇಂಥ ಪ್ರವಾಸಗಳಿಂದ ಹೊಸತನ್ನು ಕಲಿಯುವ ಮೂಲಕ ಹೊಸ ಅನುಭವ ಪಡೆಯಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಜಪಾನ್ ಇತರೆ ದೇಶಗಳಿಗಿಂತ ವಿಭಿನ್ನವಾಗಿದೆ. ಅಲ್ಲಿನ ಸಂಸ್ಕೃತಿ ಹಾಗೂ ಭಾಷೆ ವಿಭಿನ್ನವಾಗಿದೆ. ಅಲ್ಲಿ ಹೆಚ್ಚು ವಯಸ್ಕರು ಇದ್ದಾರೆ. ಕಾರಣ ಅಲ್ಲಿನ ಜೀವನ ಶೈಲಿಯಾಗಿದೆ. ಚಿಕ್ಕಂದಿನಿAದಲೇ ಮಕ್ಕಳಿಗೆ ಬದುಕುವ ಸಂಸ್ಕಾರ, ಸಂಸ್ಕೃತಿ ಹಾಗೂ ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರವಾಗಿ ಬದುಕುವುದನ್ನು ಕಲಿಸುತ್ತಾರೆ. ಇದರಿಂದ ಹೆಚ್ಚು ವರ್ಷ ೧೨೦ರಿಂದ ೧೩೦ ವರ್ಷಗಳವರೆಗೆ ಬದುಕುತ್ತಾರೆ ಎಂಬುದನ್ನು ಓದಿದ್ದೇನೆ ಎಂದರು.
ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದಬೇಕು. ಎಷ್ಟು ಜನ ಸ್ನೇಹಿತರಿದ್ದಾರೆ ಎನ್ನುವುದಕ್ಕಿಂತ ಎಷ್ಟು ಪುಸ್ತಕಗಳನ್ನು ಓದಿದ್ದೇನೆ ಎಂಬುದನ್ನು ಅರಿಯಬೇಕು. ಪುಸ್ತಕಗಳ ಓದಿದಷ್ಟು ಜ್ಞಾನ ಹೆಚ್ಚಾಗುತ್ತದೆ. ಸದಾ ಮಾನಸಿಕ ಹಾಗೂ ದೈಹಿಕ ಸ್ಥಿರತೆ ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಸಮಯ ದೊಡ್ಡ ವರ ಇದ್ದಂತೆ. ಅದನ್ನು ಸದ್ಬಳಕೆ ಮಾಡಿಕೊಂಡು ಈಗಿನಿಂದಲೇ ಜೀವನ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಪಾನ್‌ಗೆ ತೆರಳುತ್ತಿರುವ ವಿದ್ಯಾರ್ಥಿಗಳು ಅಲ್ಲಿಂದ ಕಲಿತು ಬದಲಾವಣೆ ಮಾಡಿಕೊಂಡು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಪೋಷಕರು ಸಹ ಅತಿಯಾದ ಕಾಳಜಿ ವಹಿಸಬಾರದು. ಒಳ್ಳೆಯ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಪೋಷಕರೇ ಮಾದರಿಯಾಗಿ ಜೀವನ ನಡೆಸಬೇಕು. ಆಗ ಮಕ್ಕಳು ಪೋಷಕರನ್ನು ನೋಡಿಕೊಂಡೇ ಬೆಳೆಯುತ್ತಾರೆ. ಪೋಷಕರೇ ಮಕ್ಕಳಿಗೆ ಆದರ್ಶರಾಗಿರಬೇಕು. ಕನಸುಗಳ ಹಾದಿಯಲ್ಲಿ ಆಸೆಗಳ ಬಿತ್ತಬಾರದು. ಮೌಲ್ಯಗಳನ್ನು ಬಿತ್ತಬೇಕು. ಸರಳತೆ ಬೆಳೆಸಬೇಕು. ಬೆಲೆ ಕಟ್ಟುವ ಸಂಸ್ಕೃತಿ ಬಿಟ್ಟು, ಮೌಲ್ಯ ಸಂಸ್ಕೃತಿ ಬಿತ್ತಬೇಕು ಎಂದು ಕರೆ ನೀಡಿದರು.
ಟ್ರಸ್ಟ್ನ ಅಧ್ಯಕ್ಷ ಮಂಜು ಮಾತನಾಡಿ, ನಮ್ಮ ಶಾಲೆಯಿಂದ ಈ ಬಾರಿ ೮ ವಿದ್ಯಾರ್ಥಿಗಳು ೪ನೇ ಬಾರಿಗೆ ಜಪಾನ್‌ನಲ್ಲಿ ನಡೆಯುವ ಹೈಗೋ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಕೋಬ್, ಹೈಗೋ ಜಪಾನ್ ಎಂಬ ವಿದ್ಯಾರ್ಥಿ ವಿನಿಮಯ
ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ೧೦ ದಿನಗಳ ಕಾಲ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ವಿಸ್ಮಯ್.ಆರ್, ನಿಶ್ಚಯ್.ಆರ್, ಸಾನ್ವಿಶ್ರೀಧರ್, ಸಿರಿಲಕ್ಷಿö್ಮ, ಹಿತೇಶ್‌ಸಿಂಗ್, ಪರಿಣಿತ್ ಜೆ.ಗೌಡ, ಮನ್ವಿತ್‌ರಾಜ್ ದತ್ತಾತ್ರೇಯ, ದುಶ್ಯಂತ ಎಂ.ಎ ಆಯ್ಕೆಯಾಗಿದ್ದಾರೆ. ನಮ್ಮ ಶಾಲೆಯು ಎಲ್ಲ ಚಟುವಟಿಕೆ ಆಧಾರಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಕರಾಟೆ, ಯೋಗ, ಕ್ರೀಡೆಯಲ್ಲೂ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.




