ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಬೋರೆಯಲ್ಲಿ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಹಕ್ಕಿ ಪಿಕ್ಕಿ ಸಮುದಾಯ ನಿವಾಸಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ನಾಮಫಲಕ ಉದ್ಘಾಟನೆ ಮಾಡಿದ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡ ಕುಮಾರ್ ಸಮತಳ ಅವರು ಈ ಸಮುದಾಯಗಳು ಹರಿಯುವ ನದಿಯಂತೆ ಒಂದು ಕಡೇ ನೆಲೆ ನಿಲ್ಲದೆ ಇರುವುದರಿಂದ ಸರ್ಕಾರದ ಸಮರ್ಪಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಒಂದುಕಡೇ ನೆಲೆ ನಿಂತರೆ ನಮಗೆ ನಿವೇಶನ ವಸತಿ ಸೇರಿ ಹಲವು ಸೌಲಭ್ಯಗಳ ಜೊತೆಗೆ ಉಳುಮೆ ಮಾಡಲು ಭೂಮಿಯನ್ನು ಸಹ ಪಡೆಯಬಹುದು ಎಂದರು.
ತಿಪಟೂರು, ಗೌರಿಬಿದನೂರು, ತುಮಕೂರು, ಮಂಡ್ಯದ ನಾಗಮಂಗಲ, ಪಾಂಡವಪುರ ಸೇರಿದಂತೆ ಹಲವು ಕಡೇ ಸರ್ಕಾರದ ವತಿಯಿಂದ ಎರಡರಿಂದ ಮೂರು ಎಕರೆ ಭೂಮಿ ಸಹ ಸಿಕ್ಕಿದೆ ಎಂದರು.

ಪ್ರಗತಿಪರ ಹೋರಾಟಗಾರರಾದ ಶ್ರೀನಿವಾಸ್ ಕಂದೇಗಾಲ ಮಾತನಾಡಿ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ವತಿಯಿಂದ ಭೂಮಿ ವಸತಿ ನಿವೇಶನ ಸಿಗಬೇಕೆಂದು ಹಕ್ಕಿಪಿಕ್ಕಿ ಸಮುದಾಯಗಳಾದ ಹುಣಸೂರು,ಪಿರಿಯಪಟ್ಟಣದ ಟೈಗರ್ ಬ್ಲಾಕ್ ಮತ್ತು ಶಿಕಾರಿ ಪುರ ಎನ್ನುವ ಹಕ್ಕಿ ಪಿಕ್ಕಿ ಹಾಡಿಗಳಲ್ಲಿ ಹಲವು ಹೋರಾಟಗಳನ್ನು ಮಾಡಿ ಬದುಕಿಗೆ ಬೇಕಾದ ಹಲವು ಸೌಲಭ್ಯಗಳನ್ನ ಸಂಘಟಿತ ಹೋರಾಟದಿಂದ ಪಡೆಯಲು ಸಾಧ್ಯ. ಹಾಗಾಗಿ ಎಲ್ಲರೂ ಒಟ್ಟುಗೂಡಿ ಹೋರಾಡಿದರೆ ನಮಗೆ ಎಲ್ಲಾ ತರಹದ ಹಕ್ಕುಗಳು ಸಿಗುತ್ತದೆ ಎಂದು ತಿಳಿಸಿದರು
ಹಿರಿಯ ಹೋರಾಟಗಾರ ಮರಿಯಪ್ಪ ಮಾತನಾಡಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಲಂ ಜನರನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಹೋರಾಡಿ ನಿವೇಶನ, ವಸತಿ ಹಕ್ಕುಪತ್ರ ಸೇರಿದಂತೆ ಸಾವಿರಾರು ಜನರಿಗೆ ತಲುಪುವ ಹೋರಾಟ ಮಾಡಲಾಗಿದೆ ಎಂದು ತಿಳಿಸಿದರು.
ರಾ.ರೈ ಸಂಘದ ಸ್ಥಳಿಯ ಪಂಚಾಯ್ತಿ ಮಾಜಿ ಸದಸ್ಯರಾದ ಕ್ರೀಷ್ಣ ರವರು ಮಾತಾನಾಡಿ.ಈ ಸಮುದಾಯಕ್ಕೆ ನನ್ನ ಅಧಿಕಾರದ ಅವದಿಯಲ್ಲಿ.ಹಲವು ರೀತಿಯ ದಾಖಲೆಗಳು ನೀಡಿ ಇವರಿಗೆ ಬೇಕಿರುವ ಸೌಲಭ್ಯಗಳನ್ನು ಪಡೆಯಲು ಸಹಕರ ನೀಡಿದ್ದೆ.ಮುಂದೆಯು ಸಹ ಈ ಸಮುದಾಯದ ಪರವಾಗಿ ಜೋತೆಯಲ್ಲಿರುತ್ತೇನೆಂದು ಅಶಯ ನುಡಿಗಳನ್ನು ನುಡಿದರು.

ಕರ್ನಾಟಕ ಜನಶಕ್ತಿ ಸಿದ್ದರಾಜು ಮಾತನಾಡಿ ಮಂಡ್ಯದ ಎಲ್ಲಾ ಪದಾಧಿಕಾರಿಗಳ ಒಗ್ಗಟ್ಟಿನಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗ್ಗರಳ್ಳಿ ಮಟ್ಟಿಯಿಂದ ಈ ಸಮುದಾಯವನ್ನು 2016 ರಲ್ಲಿ ದೌರ್ಜನ್ಯದಿಂದ ಒಕ್ಕಲಿಬ್ಬಿಸಿದ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಆಹೋರಾತ್ರಿ ಧರಣಿ ನಡೆಸಿ ಎರಡು ಎಕ್ಕರೆ ಸರ್ಕಾರಿ ಜಮೀನನ್ನು47 ಕುಟುಂಬಗಳಿಗೆ 30×40 ರಂತೆ ಜಿಲ್ಲಾಡಳಿತದ ವತಿಯಿಂದ ಮಂಜೂರು ಮಾಡಿಸಲಾಯಿತು ಎಂದರು.
ಈ ಕುಟುಂಬಗಳ 36 ಜನರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ, ಉಳಿದ12ಕುಟುಂಬಗಳಿಗೆ ಹಕ್ಕುಪತ್ರ ಪಡೆಯುವ ಜೊತೆಗೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರು ಈ ಸಮುದಾಯಕ್ಕೆ ವಸತಿ ಮತ್ತು ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲೆ ಮತ್ತು ಮೂಲಭೂತ ಹಕ್ಕುಗಳಾದ ವಿದ್ಯುತ್, ಕುಡಿಯುವ ನೀರು,ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಇಷ್ಟು ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಅಧ್ಯಕ್ಷ ಪ್ರಭು, ಗೌರವಾಧ್ಯಕ್ಷ ರೈಸ್, ಕಾರ್ಯದರ್ಶಿ ಚಿಕ್ಕೂ ಹಾಗೂ ಪದಾಧಿಕಾರಿಗಳಾದ ರುಖೇಶ್, ಕನಿರಾಜು, ಶಶಿಕುಮಾರ್, ಚೆಂಗುಮಣಿ. ಮಹಿಳಾ ಮುಖಂಡರಾದ ಶಾಂತಿ, ಸ್ವಾತಿ, ಭವಾನಿ, ವರಲಕ್ಷ್ಮಿ ಭಾಗವಹಿಸಿದ್ದರು.




