ಅನುದಾನ ಹಂಚಿಕೆಯಲ್ಲಿ ಜೆ ಡಿ ಎಸ್ ಮತ್ತು ಬಿ ಜೆ ಪಿ ಸದಸ್ಯರುಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಪುರಸಭೆ ಅಧ್ಯಕ್ಷ ಮತ್ತು ಮುಖ್ಯ ಅಧಿಕಾರಿ ವಿರುದ್ಧ ಮಳವಳ್ಳಿ ಪುರಸಭೆ ಸದಸ್ಯರು ಪ್ರತಿಭಟನೆ ಮಾಡಿದರು.
ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡಸಿ ಸದಸ್ಯ ನಂದಕುಮಾರ್ ಮಾತನಾಡಿ ಪುರಸಭೆಯ 2025-2026ನೇ ಹಣಕಾಸು ಯೋಜನೆಯಲ್ಲಿ 2.08 ಕೋಟಿ ಅನುದಾನದಲ್ಲಿ ಪುರಸಭೆಯ ವಿಶೇಷ ಸಭೆಯಲ್ಲಿ ಅನುಮೋದನೆಗೊಂಡಿದ್ದ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸದೆ ಬದಲಿ ಕ್ರಿಯಾ ಯೋಜನೆಯನ್ನು ಏಕಪಕ್ಷೀಯವಾಗಿ ಪುರಸಭೆ ಅಧ್ಯಕ್ಷ ಮತ್ತು ಮುಖ್ಯ ಅಧಿಕಾರಿ ಕಳುಹಿಸಿದ್ದಾರೆಂದು ದೂರಿದರು.
2.08 ಕೋಟಿಯ ಅನುದಾನದಲ್ಲಿ 83 ಲಕ್ಷ ರೂ.ಗಳು ಬರೀ 3 ವಾರ್ಡ್ ಗಳಿಗೆ ಮಾತ್ರ ಸೀಮಿತವಾಗಿದೆ. ಜೊತೆಗೆ ಪುರಸಭೆ ಸದಸ್ಯರ ಹಕ್ಕುಚ್ಯುತಿ ಮಾಡಿದ್ದಾರೆ. ಎಲ್ಲಾ ವಾರ್ಡ್ ಗಳಿಗೆ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ, ಸದಸ್ಯರಾದ ಸಿದ್ದರಾಜು, ಪ್ರಶಾಂತ್, ರವಿ ಹಾಗೂ ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




