Thursday, November 19, 2026

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಪ್ರಕರಣ | NIA ಗೆ ಕೊಡಿ ಎಂಬುದು ಕೇಸನ್ನು ಮುಚ್ಚಿಹಾಕುವ ‍‍ಷಡ್ಯಂತ್ರ : ಹಲ್ಲೇಗೆರೆ ಶಿವರಾಮ್

ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ಇದರಂತೆ ಎಸ್ಐಟಿ ತನಿಖೆ ಕೈಗೊಂಡಿರುವ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಸಂಘ ಪರಿವಾರ ಮುಖಂಡರು ಕೋಮು ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದು, ಇಂತಹವರ ವಿರುದ್ದ ಸರ್ಕಾರ ಕ್ರಮ ಕೈಕೊಳ್ಳಬೇಕೆಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆಯ ರಾಜ್ಯ ಸಂಚಾಲಕ ಹಲ್ಲೇಗೆರೆ ಶಿವರಾಮ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಹಾಗೂ ಸುಪ್ರೀಮ್ ಕೋರ್ಟ್‌ ವಕೀಲ ದಯಾನಂದ್ ಅವರ ತಂಡ ಹಾಗೂ ಮುಸುಕುದಾರಿ ಭೀಮ ಎಲ್ಲರು ಸೇರಿ ಸತ್ಯವನ್ನು ಬಯಲಿಗೆ ತಂದು, ತಪ್ಪಿತಸ್ತರಿಗೆ ಶಿಕ್ಷೆ ಕೊಡಿಸುತ್ತಾರೆ, ಧರ್ಮಸ್ಥಳದಲ್ಲಿ ನಡೆದಿರುವ ರಕ್ತದ ಕಲೆಯನ್ನು ತೊಳೆಯುತ್ತಾರೆ ಎಂದು ಜನ ನಂಬಿದ್ದಾರೆ. ಈಗಿರುವಾಗ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿ ಆ ಮೂಲಕ ಕೇಸು ಮುಚ್ಚಿ ಹಾಕಲು ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

SDPI ಹೋರಾಡಿದರೆ ತಪ್ಪೇನು ?

ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ, ಇಲ್ಲಿರುವ ರಾಜಕೀಯ ಪಕ್ಷಗಳಿಗೂ ಈ ನೆಲದಲ್ಲಿ ನಡೆಯುವ ಅನ್ಯಾಯ ಅತ್ಯಾಚಾರ ಅಕ್ರಮಗಳನ್ನು ಖಂಡಿಸುವ ಹಕ್ಕಿದೆ, ಅದನ್ನು ಜಾತಿ ಧರ್ಮದ ಆಧಾರದಲ್ಲಿ ವಿಂಗಡಿಸುವವರನ್ನು ಖಂಡಿಸುತ್ತೇವೆ. ಈ ದೇಶದ ರಾಜಕೀಯ ಪಕ್ಷವಾಗಿ SDPI ಪಕ್ಷದ ಮುಖಂಡರು ಹಲ್ಲೆಗೆ ಒಳಗಾದ ಸ್ವಾತಂತ್ರ ಪತ್ರಿಕೆ ಮಾದ್ಯಮದ ಪ್ರತಿನಿಧಿಗಳನ್ನು ಆಸ್ಪತ್ರೆಗೆ ಹೋಗಿ ಸಂತಾನ ಹೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.

ಬಣ್ಣ ಬಯಲು ಮಾಡಿದ ಸಮೀರ್

ಸಮೀರ್ ಎಂ.ಡಿ. ಕಳೆದ ನಾಲೈದು ದಶಕಗಳಿಂದ ಹಿಂದೂ ಧರ್ಮದ ದೇವಸ್ಥಾನವನ್ನು ಕಬಳಿಸಿ ಒಂದು ಟ್ರಸ್ಟ್‌ನ್ನು ರಚಿಸಿಕೊಂಡು ಅದರ ಮುಖ್ಯಸ್ಥರಾಗಿ ತಾನು ದೇವ ಮಾನವ ಎಂದು ಘೋಷಣೆ ಮಾಡಿಕೊಂಡು ದೇವರ ಹೆಸರಿನಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡಿ ತನ್ನ ನೆರಳಿನಲ್ಲಿ ಅನೇಕ ಅತ್ಯಾಚಾರ ಕೊಲೆಗಳು ನಡೆದರೂ ದೇವರ ಹುಂಡಿ ಹಣದಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಿ ಮೆರೆಯುತ್ತಿರುವ ವ್ಯಕ್ತಿಯ ಬಣ್ಣ ಬಯಲು ಮಾಡಿದ್ದು, ಸಮೀರ್ ಎಂ.ಡಿ ತನ್ನ ಬುದ್ಧಿವಂತಿಕೆ, ತನ್ನ ಪ್ರತಿಭೆ ಬಳಸಿ ಅಲ್ಲಿ ನಡೆದಿರುವ ಘಟನೆಗಳನ್ನು ಆಳವಾಗಿ ಅಧ್ಯಯನ ಮಾಡಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದು ತಪ್ಪೇ? ಎಂದು ಪ್ರಶ್ನಿಸಿದರು.

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್, ಸುನೀಲ್, ಅಶೋಕ್, ಪ್ರತಾಪ್ ಸಿಂಹ, ವಿಜಯೇಂದ್ರ, ರವಿ, ಇವರೆಲ್ಲಾ ಈ ಪ್ರಕರಣದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು ನಾಗರೀಕರು ಎಚ್ಚರಿಕೆ ವಹಿಸಬೇಕು. ಸಚಿವರು ದಿನೇಶ್ ಗುಂಡುರಾವ್ ಎಡಪಂಥಿಯರ ಒತ್ತಾಯಕ್ಕೆ ಮಣಿದು ಎಸ್.ಐ.ಟಿ ರಚನೆ ಮಾಡಿದ್ದೇವೆ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್ ಅವರು ನನ್ನಂತಹ ನೂರಾರು ಡಿ.ಕೆ.ಶಿಗಳು ನಿಮ್ಮ ರಕ್ಷಣೆಗೆ ಇದ್ದೇವೆ ಎನ್ನುತ್ತಾರೆ, ಇವರ ಬಗ್ಗೆಯೂ ಕೂಡ ಎಚ್ಚರಿಕೆ ವಹಿಸಬೇಕೆಂದರು.

ಗೋಷ್ಠಿಯಲ್ಲಿ ಬೋರಲಿಂಗೇಗೌಡ ಹಾಗೂ ದೊರೆಸ್ವಾಮಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ