Sunday, November 22, 2026

ಪ್ರಾಯೋಗಿಕ ಆವೃತ್ತಿ

”ಚುನಾವಣಾ ಆಯೋಗ ಎಂಬ ಕುಂಬಳಕಾಯಿ ಕಳ್ಳ ಹೆಗಲನ್ನಷ್ಟೇ ಅಲ್ಲ ಮೈಯೆಲ್ಲಾ ತಡವಿಕೊಳ್ಳುತ್ತಿದೆ!” : ಪ್ರಿಯಾಂಕ್ ಖರ್ಗೆ

ಚುನಾವಣಾ ಆಯೋಗ ಎಂಬ ಕುಂಬಳಕಾಯಿ ಕಳ್ಳ ಹೆಗಲನ್ನಷ್ಟೇ ಅಲ್ಲ ಮೈಯೆಲ್ಲಾ ತಡವಿಕೊಳ್ಳುತ್ತಿದೆ! ನಿನ್ನೆ ರಾಹುಲ್ ಗಾಂಧಿಯವರು ಮತಗಳ್ಳತನವನ್ನು ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದೇ ತಡ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್ಸೈಟ್ ಗಳು ಕೆಲ ಹೊತ್ತು ಬೀಗ ಹಾಕಿಕೊಂಡು ಕುಳಿತಿದ್ದವು ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ 2024ರ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಡೌನ್ಲೋಡ್ ಆಗದಂತೆ ತಾಂತ್ರಿಕ ಕುತಂತ್ರ ಮಾಡಲಾಗಿದೆ! ಎಂದಿದ್ದಾರೆ.

“>

 

ಚುನಾವಣಾ ಆಯೋಗವು ಮತಗಳ್ಳತನದ ಸಾಕ್ಷಿ ನಾಶಕ್ಕೆ ಮುಂದಾಗಿದೆಯೇ? ಜನತೆಗೆ ತನ್ನ ಕಳ್ಳತನ ತಿಳಿಯದಂತೆ ಮಾಡಲು ಸಾಹಸ ಮಾಡುತ್ತಿದೆಯೇ? ಈ ಕುತಂತ್ರಗಾರಿಕೆಗೆ ಯಾರ ನಿರ್ದೇಶನವಿದೆ? ಚುನಾವಣಾ ಆಯೋಗವು ಪಾರದರ್ಶಕತೆಯಿಂದ ಪಲಾಯನ ಮಾಡುತ್ತಿರುವುದೇಕೆ? ಲೋಪಗಳೇ ಆಗಿಲ್ಲ ಎಂದಾದರೆ ಈ ಕಳ್ಳಾಟ ಏಕೆ? ಎಂದು ‘ಎಕ್ಸ್’ ನಲ್ಲಿ ಪ್ರಶ್ನಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ