Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕಪ್ಪುತಲೆ ಹುಳು: ತೆಂಗಿನ ಬೆಳೆ ನಷ್ಠ ಅಂದಾಜಿಗೆ ಸರ್ವೆ ಆರಂಭ

ವರದಿ : ನ.ಲಿ.ಕೃಷ್ಣ

ರೈತರ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿದ್ದ ಕಪ್ಪುತಲೆಹುಳು ಬಾಧೆ ಯಿಂದ ತೆಂಗಿನ ಮರ ಸಂಪೂರ್ಣವಾಗಿ ನಾಶದ ಹಂತಕ್ಕೆ ತಲುಪಿವೆ ಎಂದು ರೈತರ ಅಳಲಿನ ಹಿನ್ನಲೆಯಲ್ಲಿ ಕಪ್ಪು ತಲೆ ಹುಳು ಬಾಧಿತ ತೆಂಗಿನ ಮರಗಳ‌ ಸರ್ವೆ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಮದ್ದೂರಿನ ತೊಟಗಾರಿಕೆ ಇಲಾಖೆಯ ಸಹಾಯಕ ನೀರ್ದೆಶಕಿ ರೇಖಾ ಳಿಸಿದ್ದಾರೆ

ನುಡಿ ಕರ್ನಾಟಕ. ಕಾಮ್ ಜೊತೆ ಮಾತನಾಡಿದ ಅವರು, ಬಹು ವರ್ಷಗಳ ರೈತರ ರೈತಪರ ಸಂಘಟನೆಗಳ ಆಗ್ರಹದ ಹಿನ್ನಲೆಯಲ್ಲಿ‌ಸರ್ಕಾರ ತೆಂಗಿನ ಬೆಳೆ ಗೆ ಕಪ್ಪುತಲೆ ಹುಳುಬಾಧೆಯಿಂದ ಆಗಿರುವಾ ನಷ್ಠ ಅಂದಾಜಿಸಿ ಪರಿಹಾರ ನೀಡಲು ವೈಜ್ಞಾನಿಕ ಸರ್ವೆಗಾಗಿ ಆಪ್ ಅಭಿವೃದ್ದಿ ಪಡಿಸಿದ್ದು ಈ ಆಪ್ ಬಳಕೆ ಕುರಿತು ಕೃಷಿ ಸಖಿಯರು ಸೇರಿದಂತೆ ಮತ್ತಿತರ ಸಿಬ್ಬಂದಿಗಳಿಗೆ ಇಂದು ತರಬೇತಿ ನೀಡುತ್ತಿದ್ದು ನಾಳೆಯಿಂದ ಬಾಧಿತ‌ ತೋಟಗಳಿಗೆ ತೆರಳಿ ಕಪ್ಪುತಲೆ‌ಹುಳು ಬಾಧಿತ ತೆಂಗಿನ ಮರಗಳ ಸರ್ವೆ ಕಾರ್ಯ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಎಲ್ಲಾ ತೋಟಗಳನ್ನು ತಪ್ಪದೆ ಸರ್ವೆ ಮಾಡಲಿದ್ದು ರೈತರು ಈ ಸರ್ವೆ ಕಾರ್ಯಕ್ಕೆ ಸಹಕರಿಸಲು ರೇಖಾ ಅವರು ಮನವಿ ಮಾಡಿದ್ದಾರೆ

ಸ್ವಾಗತ : ಕಪ್ಪು ತಲೆ ಹುಳುಬಾಧೆ ಯಿಂದ ತೆಂಗು ಬೆಳೆಗಾರ ಸಂಕಷ್ಠಕ್ಕೆ ಸಿಲುಕಿದ್ದು ಅವರಿಗೆ ಪರಿಹಾರ ನೀಡಲು ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ರಾಜ್ಯದಲ್ಲೆ ಮೊದಲಿಗೆ ಧ್ವನಿ  ಎತ್ತಿದ್ದು, ಇದೀಗ ತಡವಾಗಿಯಾದರೂ ಸರ್ಕಾರ ಸರ್ವೆ ಕಾರ್ಯ ಆರಂಭಿಸಿದ್ದು ಶೀಘ್ರವಾಗಿ ಸರ್ವೆ ಕಾರ್ಯ ಮುಗಿಸಿ ಈವರೆಗಿನ ಪ್ರತಿ ಮರದ ಇಳುವರಿ ನಷ್ಠ, ಬೆಳವಣಿಗೆ ನಷ್ಠ ಮತ್ತು ಮುಂದಿನ ದಿನಗಳಲ್ಲಿ ಬಾಧಿತ ಮರ ಸುಧಾರಣೆವರೆಗಿನ ನಷ್ಠ ಅಂದಾಜಿಸಿ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಪ್ರಗತಿಪರ ಸಂಘಟನೆಯ ನ.ಲಿ.ಕೃಷ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ

ಅವೈಜ್ಞಾನಿಕ : ಕಪ್ಪು ತಲೆ‌ಹುಳು ಬಾಧೆ ತೇವಾಂಶ ವಾತವಾರಣದಿಂದ ತಗ್ಗಿದ್ದು ಹೊಸಗರಿ ಬಂದಿರುವ ಸಂದರ್ಭದಲ್ಲಿ ಆಪ್ ಬಳಸಿ ಸರ್ವೆ ಕಾರ್ಯ ಆರಂಭಿಸಿರುವ ತೊಟಗಾರಿಕೆ ಇಲಾಖೆ ಧೋರಣೆ ಖಂಡನೀಯ.
ಬೇಸಿಗೆಯಲ್ಲಿ ರೋಗ ದಟ್ಟವಾಗಿದ್ದಾಗ ಸಕಾಲಿಕವಾಗಿ ಸರ್ವೆ ಕಾರ್ಯ ನಡೆಸದೆ ತೆಂಗು ಬೆಳೆಗಾರರನ್ನು ವಂಚಿಸಲು ರೋಗದ ತೀವ್ರತೆ ಮರೆ ಮಾಚಲು ಸರ್ಕಾರ ಈಗ ಗರಿರೋಗದ ಸರ್ವೆಗೆ ಮುಂದಾಗಿದೆ, ಇದು ಸರಿಯಲ್ಲಾ ಎಂದು ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ‌ ಲಕ್ಷ್ಮಣ್ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿ ತೆಂಗಿನ ಮರಕ್ಕೂ ಪರಿಹಾರ ನಿಗಧಿ ಮಾಡಿ ಕೂಡಲೇ ವಿತರಣೆಗೆ ಕ್ರಮ ವಹಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ