Saturday, November 21, 2026

ಪ್ರಾಯೋಗಿಕ ಆವೃತ್ತಿ

ಭಯೋತ್ಪಾದನೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು : ಸ್ವಾಮಿ ನಿಶ್ಚಲಾನಂದ

ವಿವೇಕಯುತ ನಿಲುವು ತಳೆದ ಒಕ್ಕಲಿಗ ಗುರು ಪೀಠಗಳು

ನಿನ್ನೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ನರಮೇಧದ ವಿಚಾರವಾಗಿ ಒಕ್ಕಲಿಗ ಗುರುಪೀಠಗಳು ವಿವೇಕಯುತ ನಿಲುವು ತಳೆದಿವೆ. ಆದಿಚುಂಚನಗಿರಿಯ ನಿರ್ಮಲಾನಂದನಾಥರು ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದರು ಪ್ರಕಟಣೆಯ ಮೂಲಕ ಮಠದ ನಿಲುವುಗಳನ್ನು ತಿಳಿಸಿದ್ದಾರೆ. “ಭಯೋತ್ಪಾದನೆ ಸಹಿಸಲಾಗದು, ಉಗ್ರರ ವಿಚಾರದಲ್ಲಿ ರಾಜಕೀಯ ಪಕ್ಷಗಳು ಧರ್ಮ ಧರ್ಮಗಳ ನಡುವೆ ತಂದಿಡುವ ಪಾಪದ ಕೆಲಸ ಮಾಡಬಾರದು” ಎಂದು ಹೇಳಿರುವುದಲ್ಲದೆ, ಜನತೆ ಭಾರತೀಯ ಸೌಹಾರ್ಧ ಪರಂಪರೆಯನ್ನು ಮುಂದುವರೆಸಬೇಕು ಎಂದಿವೆ.

ಸ್ವಾಮಿ‌ ನಿಶ್ಚಲಾನಂದರು ಹೇಳಿದ್ದೇನು?
ಭಾರತೀಯರಾದ ನಾವು ಶಾಂತಿಪ್ರಿಯರು, ಎಲ್ಲಾ ಧರ್ಮ ಜನಾಂಗದವರನ್ನು ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಗೌರವಿಸಿ ಒಟ್ಟಿಗೆ ಬಾಳುವ ವಿಶ್ವಾಸವಿರಿಸಿಕೊಂಡಿರುವವರು. ಇತ್ತೀಚಿನ ಪಹಲ್ಗಾಮ್ ದಾಳಿ ಮನುಕುಲವನ್ನೇ ಅವಮಾನಿಸುವಂತಹ ನೀಚ ಕೃತ್ಯ ಇದನ್ನು ಸರ್ವರೂ ಖಂಡಿಸಲೇಬೇಕು.

ಯಾವ ಧರ್ಮದವರಾದರೇನು? ಎಲ್ಲರೂ ಮನುಷ್ಯರೇ ಮನುಷ್ಯ-ಮನುಷ್ಯರ ಮಧ್ಯೆ ಇಂತಹ ಹಿಂಸಾಕೃತ್ಯಗಳು ನಾಗರೀಕ ಸಮಾಜಕ್ಕೆ ಶೋಭೆ ತರುವಂತದಲ್ಲ. ರಾಜಕೀಯ ಹಸ್ತಕ್ಷೇಪ ಸಲ್ಲದು, ಎಲ್ಲರಲ್ಲೂ ಐಕ್ಯ ಮತ್ಯ ಅಗತ್ಯವಿದ್ದು ಧಾರ್ಮಿಕ ಮೂಲಭೂತ ವಾದವನ್ನು ಖಂಡಿಸೋಣ, ದಯಯೇ ಧರ್ಮದ ಮೂಲ ಮಾನವತಾವಾದವೇ ನಮ್ಮ ಧರ್ಮ ಎಂಬುದನ್ನು ಎತ್ತಿಹಿಡಿಯೋಣ.
-ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ

ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ:
ನಿರ್ಮಲಾನಂದ ನಾಥ ಸ್ವಾಮೀಜಿ

ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅದನ್ನು ನಾವು ಖಂಡಿಸಲೇಬೇಕು. ಪಕ್ಷ ರಾಜಕಾರಣ ಮರೆತು ನಾವೆಲ್ಲರೂ ಒಗ್ಗಟ್ಟಾಗಿರಬೇಕಾದ ಸಮಯವಿದು. ನಾವೆಲ್ಲರೂ ಭಾರತೀಯರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ.

ಇದು ಭಾರತದ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿಯಾಗಿದೆ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು. ಎಲ್ಲ ಧರ್ಮಗಳೂ ಶಾಂತಿಯನ್ನು ಬಯಸುತ್ತವೆ. ಮನುಕುಲಕ್ಕೆ ಕಂಠಕವಾಗಿರುವ ಭಯೋತ್ಪಾದನೆಯನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಭಾರತೀಯರಾಗಿ ಒಗ್ಗಟ್ಟಿನಿಂದ ಎದುರಿಸೋಣ.
-ಆದಿಚುಂಚನಗಿರಿ ಮಹಾಸಂಸ್ಥಾನ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ