Friday, November 20, 2026

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿಗೆ ಶ್ರಮಿಸಿದ ಪಟೇಲ್ ಸಿದ್ದೇಗೌಡ ; ನಿಖಿಲ್ ಕುಮಾರಸ್ವಾಮಿ

ಗೊರವಾಲೆ ಪಟೇಲ್ ಸಿದ್ದೇಗೌಡ ಅನೇಕ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಗೊರವಾಲೆ ಗ್ರಾಮದಲ್ಲಿ ಪಟೇಲ್‌ ಸಿದ್ದೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಟೇಲ್ ಸಿದ್ದೇಗೌಡರ ಪ್ರತಿಮೆ ಅನಾವರಣವನ್ನು ಮಾಜಿ ಪ್ರಧಾನಿ ದೇವೇಗೌಡರ ಕೈಯಿಂದ ಅನಾವರಣ ಮಾಡಿಸಬೇಕು ಎಂದು ಗ್ರಾಮಸ್ಥರು ಬಯಸಿದ್ದರು. ಕುಮಾರಣ್ಣ ಬರಬೇಕು ಎಂದು ಹೇಳುತ್ತಿದ್ದರು, ಆದರೆ ಅವರ ಕೆಲಸದ ಒತ್ತಡದಿಂದ ಬರಲು ಆಗದ ಕಾರಣ ಪುತ್ತಳಿ ಅನಾವರಣವನ್ನು ನಾವುಗಳು ಮಾಡಿದ್ದೇವೆ ಎಂದರು.
ಕುಮಾರಣ್ಣ ಸಂಸದರಾಗಿ ಮಾಡಲು ಮಂಡ್ಯ ಜಿಲ್ಲೆಯ ಜನ ರಾಜಕೀಯ ಪುನರ್ಜನ್ಮ ತಂದು ಕೊಟ್ಟು ರಾಷ್ಟ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರು ಎಂದು ತಿಳಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ ಗೊರವಾಲೆ ಗ್ರಾಮದಲ್ಲಿ ಯಾವುದೇ ಭಾಗದಲ್ಲೂ ಕೆಲಸ ಆಗಿದೆ ಎಂದರೆ ಇದನ್ನು ಪಟೇಲ್ ಸಿದ್ದೇಗೌಡರು ಮಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕಾಗಿ ಅವರು ಮೊದಲನೇ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.

ಗೊರವಾಲೆ ಗ್ರಾಮದ ಕಲ್ಯಾಣ ಮಂಟಪವನ್ನು ಪಟೇಲ್ ಸಿದ್ದೇಗೌಡರ ಹೆಸರಿನಲ್ಲಿ ನಿರ್ಮಾಣ ಮಾಡಿ ಅದನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ದುದ್ದ ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಲ್ಲಲು ಬಿಡಲ್ಲ.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗದಲ್ಲಿ ಮಾಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಯಾವುದೇ ಸಂದರ್ಭದಲ್ಲಿ ಗೊರವಾಲೆ ಗ್ರಾಮವನ್ನು ಮರೆಯಲು ಸಾಧ್ಯವಿಲ್ಲ.ಚುನಾವಣೆ
ಸಂದರ್ಭದಲ್ಲಿ ಅತಿ ಹೆಚ್ಚು ಮತಗಳನ್ನು ನಮಗೆ ಕೊಡುವ ಮೂಲಕ ನಮ್ಮ ಪರ ಇದ್ದಾರೆ ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಪ್ಪಟ ಶಿಷ್ಯ ಪಟೇಲ್ ಸಿದ್ದೇಗೌಡರು ಎಂದು ತಿಳಿಸಿದರು.

ಊರಿಗೋಸ್ಕರ ತಮ್ಮನ್ನು ತಾವೇ ಅರ್ಪಿಸಿಕೊಂಡು ಮೂಲಭೂತ ಸೌಕರ್ಯ ತಂದಿರುವುದು ಪಟೇಲ್ ಸಿದ್ದೇಗೌಡರ ಶ್ರಮ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಜೆಡಿಎಸ್ ಮುಖಂಡರಾದ ಹೆಚ್.ಟಿ.ಬಾಲರಾಜುರವರು, ಪುರದಕೊಪ್ಪಲು ಶಂಕರೇಗೌಡ, ಆರ್ ಎಪಿಸಿಎಂಎಸ್ ಮಾಜಿ ನಿರ್ದೇಶಕ ಜಿ.ಎಲ್. ಸತೀಶ್, ಜಿ.ಎಸ್. ಕೃಷ್ಣೆಗೌಡ, ಸಿದ್ದೇಗೌಡ, ಹೊಳಲು ಯೋಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ