Thursday, November 19, 2026

ಪ್ರಾಯೋಗಿಕ ಆವೃತ್ತಿ

ಗಣಕೀಕೃತ ಆರ್ ಟಿ ಸಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಹೊನಗಹಳ್ಳಿ ಮಠ ವ್ಯಾಪ್ತಿಯ ರೈತರಿಗೆ ಕೈ ಬರಹದ ಪಹಣಿ (ಆರ್ ಟಿ ಸಿ) ಯನ್ನು ಕಂಪ್ಯೂಟರೀಕರಣ ಮಾಡಿಕೊಡಬೇಕೆಂದು ಆಗ್ರಹಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆರಗೋಡು ಹೋಬಳಿಯ ಹೊನಗಹಳ್ಳಿ ಮಠ, ಹೆಚ್‌.ಮಠ ಕಾಲೋನಿ, ಹನಕೆರೆ, ಚನ್ನಂಕೇಗೌಡನದೊಡ್ಡಿ, ಮುದ್ದುಂಗೆರೆ, ಮದ್ದೂರು ತಾಲ್ಲೂಕು, ಸೂಳೇಮಠ, ವಳಗೆರೆಹಳ್ಳಿ ಗ್ರಾಮಗಳ ರೈತರು ಸುಮಾರು 950 ಎಕರೆ ಜಮೀನು ಹೊಂದಿದ್ದಾರೆ.ಇವೆಲ್ಲಾ ಈ ಹಿಂದೆ ಇನಾಂ ಜಮೀನಾಗಿದ್ದು, 1952 ರಲ್ಲಿ ಇನಾಂ ರದ್ದತಿ ಕೂಡ ಆಗಿ, 1958 ರಲ್ಲಿ ಇ-ಸರ್ವೆ ಕೂಡ ಆಗಿರುತ್ತದೆ. ಕಳೆದ 70-80 ವರ್ಷದಿಂದ ಕೈಬರಹದ ಪಹಣಿ ಮೂಲಕ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

2000 ನೇ ಇಸವಿಯಲ್ಲಿ ರೈತರ ಜಮೀನುಗಳ ಕಂಪ್ಯೂಟರೀಕರಣ ಆರ್.ಟಿ.ಸಿ ತಂದು ನಂತರ ನಿಲ್ಲಿಸಿರುತ್ತಾರೆ. ಸುಮಾರು 22 ವರ್ಷ ಕಳೆದರೂ ಕಂಪ್ಯೂಟರೀಕರಣ ಮಾಡಿರುವುದಿಲ್ಲ. ಅನೇಕ ಬಾರಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಸರ್ವೆ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.

2018 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಆರ್.ಟಿ.ಸಿ ಕೊಡಲು ರೈತರ ಸಭೆ ಸೇರಿಸಿ ಸಾಂಕೇತಿಕವಾಗಿ ಕೊಟ್ಟರೂ ಅದು ಆಧಿಕೃತವಾಗಿರುವುದಿಲ್ಲ. ಇದರ ಪರಿಣಾಮ ರೈತರಿಗೆ ಬ್ಯಾಂಕ್, ಸಹಕಾರ ಸಂಘದಲ್ಲಿ ಸಾಲ ನಿಲ್ಲಿಸಲಾಗಿದೆ. ಅಲ್ಲದೆ ರೈತರು, ಜಮೀನು ಮಾರಾಟ, ಅಡಮಾನ (ಕೃಷಿ ಇಲಾಖೆಯ ಸೌಲಭ್ಯ, ಪೌತಿಖಾತೆ, ವಿಭಾಗಖಾತೆ, ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ರೈತ ಪಿಂಚಣಿ, ಬೆಳೆವಿಮೆ, ಮುಖ್ಯ ಮಂತ್ರಿಗಳ ವಿದ್ಯಾರ್ಥಿ ಶಿಷ್ಯವೇತನ ಸೇರಿದಂತೆ ಯಾವುದೇ ಸೌಲಭ್ಯಗಳು ಈ ವ್ಯಾಪ್ತಿಯ ರೈತರಿಗೆ ದೊರೆತಿಲ್ಲ. ಇದಕ್ಕೆಲ್ಲ ಕೈಬರಹದ ಪಹಣಿಗೆ ಯಾವುದೇ ಕಿಮ್ಮತ್ತು ಇರದಿರುವುದೇ ಕಾರಣ ಎಂದು ದೂರಿದರು.

ಈಗ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಆನ್‌ಲೈನ್‌ ವ್ಯವಸ್ಥೆ ಇರುವುದರಿಂದ ನಾವುಗಳು ಯಾವುದೇ ಸೌಲಭ್ಯಗಳನ್ನು ಪಡೆಯದೆ ವಂಚಿತರಾಗಿದ್ದೇವೆ. ಮತ್ತು ಈ ವ್ಯಾಪ್ತಿಯ ಹೆಚ್ಚು ರೈತರು ಸಣ್ಣ ಹಿಡುವಳಿದಾರರಾಗಿದ್ದೇವೆ.ಆದ್ದರಿಂದ ಕೂಡಲೇ ಸರ್ಕಾರ ನಮ್ಮ ಜಮೀನುಗಳ ದಾಖಲೆಯನ್ನು ತುರ್ತಾಗಿ ಗಣಕೀಕೃತಗೊಳಿಸಿಕೊಡಲು (ಕಂಪ್ಯೂಟರೀಕರಣ ಆರ್.ಟಿ.ಸಿ) ಕೊಡಿಸಿಕೊಡಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಪ್ರಕಾಶ್ ಸೊಳ್ಳೆಪುರ, ಹೊನಗಳ್ಳಿ ಮಠ ಗ್ರಾಮದ ನಾಗರಾಜು, ಆರ್. ಕೆ. ರಾಮಮೂರ್ತಿ,ಎಸ್.ಬಿ ಶಂಕರ್, ಹನುಮಂತ ಮೂರ್ತಿ, ಗುರುಶಾಂತ, ರಾಮಣ್ಣ ಮೃತ್ಯುಂಜಯ, ಚಂದ್ರು ಸೊಳ್ಳೆಪುರ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ