ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ನಾವು ಬದುಕಿನಲ್ಲಿ ನೆಮ್ಮದಿ, ಆರೋಗ್ಯ ಪಡೆಯುವಿಕೆಗೆ ಸಂಗೀತ ಸೇರಿದಂತೆ ಲಲಿತ ಕಲೆಗಳನ್ನು ಅಭ್ಯಾಸ ಹಾಗೂ ಪ್ರೋತ್ಸಾಹಿಸುವುದರ
ಮೂಲಕ ಸಂಸ್ಕೃತಿ ಹಾಗೂ ಪಾರಂಪರಿಕ ಕಲೆಗಳ ಬೆಳವಣಿಗೆಗೆ ಮುಂದಾಗಬೇಕು ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್. ನಾರಾಯಣ್ ತಿಳಿಸಿದರು.
ಮಂಡ್ಯನಗರದ ಗಾಂಧಿ ಭವನದಲ್ಲಿ ಗುಡ್ ವಾಯ್ಸ್ ಸಂಗೀತ ಶಾಲೆ ಏರ್ಪಡಿಸಿದ್ದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆಗೆ ಮನಸೋಲದವರೂ. ಬಹುಷಃ ಯಾರೂ ಇಲ್ಲವೇ ಇಲ್ಲ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿ ಬದುಕಿನಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ವಿಶೇಷ ಪ್ರಭಾವಕಾರಿಯಾದ ಮಾಧ್ಯಮ ಎಂದರೆ ಅದು ಸಂಗೀತ ಕಲೆ ಮಾತ್ರ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರವಚನಕಾರ ಡಾ.ಎಸ್. ಶ್ರೀನಿವಾಸ ಶೆಟ್ಟಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಲಾವಿದರಾದ ಪುಟ್ಟರಾಜು ಹಾಗೂ ರಂಗ ನಿರ್ದೇಶಕ ರಾಚಯ್ಯ ಅವರನ್ನು ಸನ್ಮಾಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ.ಉಮೇಶ್, ಕಲಾವಿದ ಮಂಚಯ್ಯ, ಪ್ರೇರಣಾ ಮೊಬೈಕ್ಸ್ ನ ಮಾಲೀಕ ಶಶಿಕುಮಾರ್, ಶಾಲೆಯ ವ್ಯವಸ್ಥಾಪಕ, ತರಬೇತುದಾರ ಸಿ. ದೇವರಾಜು ಭಾಗವಹಿಸಿದ್ದರು.
ಕಾರ್ಯಕ್ರಮ ಹಿರಿಯ ಗಾಯಕ ವಿದ್ಯಾಶಂಕರ್ ಮತ್ತು ಗಾಮನಹಳ್ಳಿ ಸ್ವಾಮಿ ತಂಡ ಪ್ರಸ್ತುತ ಪಡಿಸಿದ ಸಂಗೀತ ಕಾರ್ಯಕ್ರಮ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.




