ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಡಾ.ಪಿ.ಬೋರೇಗೌಡರು ತಮ್ಮ ಜೀವನಯಾನ, ಆಡಳಿತ ಅನುಭವ ಮತ್ತು ಕೃಷಿ-ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಕುರಿತು ಕೃತಿಗಳ ಬಿಡುಗಡೆ ಸಮಾರಂಭವು ಮೈಸೂರಿನ ಕಲಾಮಂದಿರದಲ್ಲಿ ಸೆ.13ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿವಿ ಮಾಜಿ ಕುಲಪತಿ ಡಾ.ಎನ್.ಎಸ್.ರಾಮೇಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯು.ಟಿ.ಖಾದರ್ ಭಾಗವಹಿಸಲಿದ್ದು, ಮಾಜಿ ಮಹಾಪೌರ ಆರೀಫ್ ಹುಸೇನ್, ಪ್ರೊ.ಎಂ.ಕೃಷ್ಣೇಗೌಡ, ಡಾ.ಬಿ.ಗುರುಬಸವಯ್ಯ, ಪಿ.ವಿಶ್ವನಾಥ್, ಎಕ್ಸೆಲ್ ಸಾಪ್ಟ್ನ ಸ್ಥಾಪಕ ಸುಧನ್ವ, ಕಾವೇರಿ ಆಸ್ಪತ್ರೆಯ ಸ್ಥಾಪಕ ಡಾ.ಚಂದ್ರಶೇಖರ್ ಉಪಸ್ಥಿತರಿರಲಿದ್ದಾರೆ ಎಂದರು.
ಹೆಚ್‌ಸಿಜಿ ಆಸ್ಪತ್ರೆಯ ಅಧ್ಯಕ್ಷ ಡಾ.ಬಿ.ಎಸ್.ಅಜಯ್‌ಕುಮಾರ್, ಹೃದಯ ತಜ್ಞ ಡಾ.ಜಾವೆದ್ ನಯೀಮ್, ಜೆಎಸ್‌ಎಸ್ ವಿವಿಯ ಪ್ರೊಚಾನ್ಸಲರ್ ಡಾ.ಸುರೇಶ್, ಆದಿಚುಂಚನಗಿರಿ ವಿವಿಯ ಮಾಜಿ ಉಪಕುಲಪತಿ ಡಾ.ಎಂ.ಎ.ಶೇಖರ್, ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ, ಮಾಜಿ ಕುಲಪತಿ ಡಾ.ಎಂಎಲ್.ಮಹೇಶ್ವರ್, ರೈತ ಸ್ವಾಮಿ ಆನಂದ್ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡ ಕೆ.ಬೋರಯ್ಯ, ವಕೀಲ ಧನುಕುಮಾರ್, ಗೋವಿಂದರಾಜು, ಕೆ.ಎಂ.ಕೃಷ್ಣೇಗೌಡ ಇದ್ದರು.




