Friday, September 13, 2024

ಪ್ರಾಯೋಗಿಕ ಆವೃತ್ತಿ

ವಿನಯ್ ಆಯ್ಕೆ ಮಾಡಲು ಚಿತ್ರನಟ ಪ್ರೇಮ್ ಮನವಿ

ಸದಾ ಪದವೀಧರರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರ ಕುಂದು-ಕೊರತೆಗಳಿಗೆ ಸ್ಪಂದಿಸುತ್ತಿರುವ ದಕ್ಷಿಣ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸರಳ, ಯುವ ರಾಜಕಾರಣಿ ಎನ್.ಎಸ್.ವಿನಯ್ ಅವರನ್ನು ಆಯ್ಕೆ ಮಾಡಬೇಕೆಂದು ಕನ್ನಡ ಚತ್ರರಂಗದ ಖ್ಯಾತ ನಟ,ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ ಎನ್.ಎಸ್.ವಿನಯ್ ಅವರು ತಮ್ಮ ನೇತೃತ್ವದ ಪದವೀಧರರ ವೇದಿಕೆಯ ವತಿಯಿಂದ ಉಚಿತವಾಗಿ ಕ್ಷೇತ್ರದ ಪದವೀಧರ ಮತದಾರರಿಗೆ ನೀಡಲಾಗುತ್ತಿರುವ ವಿಮಾ ಬಾಂಡ್ ಅನ್ನು ವಿತರಣೆ ಮಾಡಿ ಮಾತನಾಡಿದರು.

ಪದವೀಧರರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸೇವೆ ಮಾಡಬೇಕು ಎಂಬ ಮಹದಾಸೆಯನ್ನು ಹೊಂದಿರುವ ಎನ್.ಎಸ್.ವಿನಯ್ ಅವರು ಇದೇ 2022ನೇ ಜೂನ್ ತಿಂಗಳಲ್ಲಿ ನಡೆಯಲಿರುವ ದಕ್ಷಿಣ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ಅತಿ ಹೆಚ್ಚು ಕನ್ನಡಿಗರನ್ನು ಹೊಂದಿರುವ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ದಕ್ಷಿಣ ಪದವೀಧರರ ವಿಧಾನ ಪರಿಷತ್ ಕ್ಷೇತ್ರವು ವಿಸ್ತಾರಗೊಂಡಿದೆ. ಒಟ್ಟು ಸುಮಾರು 1,33,000 ಮತದಾರರಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಸುಮಾರು 50ಸಾವಿರಕ್ಕೂ ಹೆಚ್ಚು ಮತದಾರರನ್ನು ವಿನಯ್ ನೊಂದಾಯಿಸಿದ್ದು ಅವರಿಗೆ ಒಂದು ಅವಕಾಶ ನೀಡಬೇಕೆಂದರು.

ಅಭ್ಯರ್ಥಿ ವಿನಯ್ ಮಾತನಾಡಿ,ನಾಲ್ಕೂ ಜಿಲ್ಲೆಗಳ ಪದವೀಧರ ಮತದಾರರನ್ನು ಭೇಟಿ ಮಾಡುತ್ತಿದ್ದು ಎಲ್ಲಾ ಕಡೆಯಿಂದ ಉತ್ತಮ ಬೆಂಬಲದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಎಲ್ಲಾ ವರ್ಗದ ನೌಕರರಿಗೆ ನಂತರ ನಿರುದ್ಯೋಗಿ ಪದವೀಧರರಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲು ಹೋರಾಟ ರೂಪಿಸುವುದು. ಪ್ರತಿ ತಾಲ್ಲೂಕುಗಳಲ್ಲಿ ಎಲ್ಲಾ ರೀತಿಯ ಪದವೀಧರರಿಗೆ ಅರ್ಹ ಕೌಶಲ್ಯ ತರಬೇತಿ ಕೇಂದ್ರ ತೆರೆದು ಸೂಕ್ತ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವಂತಹ ಗುಣಮಟ್ಟದ ತರಬೇತಿ ನೀಡುವ ಯೋಜನೆಯನ್ನು ಸರ್ಕಾರದ ವತಿಯಿಂದ ಆರಂಭಿಸುವುದು ನನ್ನ ಉದ್ದೇಶ ಎಂದರು.

ನಿರುದ್ಯೋಗಿ ಪದವೀಧರರಿಗೆ ಕೆಲಸ ಸಿಗುವವರೆಗೆ ಉಚಿತ ಬಸ್ ಪಾಸ್ ಒದಗಿಸಿಕೊಡುವುದು. ಪದವೀಧರರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ಆರಂಭಿಸಿ ಇದರ ಮೂಲಕ ಸ್ವಯಂ ಉದ್ಯೋಗ ಮಾಡಲಿಚ್ಚಿಸುವವರಿಗೆ ಸಾಲ ಸೌಲಭ್ಯ ಒದಗಿಸಿಕೊಡುವುದು ನನ್ನ ಪ್ರಣಾಳಿಕೆ ಪ್ರಮುಖ ಅಂಶಗಳಾಗಿದೆ. ನನ್ನನ್ನು ಆಯ್ಕೆ ಮಾಡಿದರೆ ಇಡೀ ದಕ್ಷಿಣ ಪದವೀಧರರ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕಚೇರಿ ತೆರೆದು ವಾರಕ್ಕೊಮ್ಮೆ ಪದವೀಧರರ ಹಾಗೂ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ರೂಪಿಸುವ ಕೆಲಸ ಮಾಡಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪದವೀಧರ ಶಿಕ್ಷಕ ಸಂಘದ ಅಧ್ಯಕ್ಷ ಸಿ.ಮಹೇಶ್, ಪ್ರಧಾನ ಕಾರ್ಯದರ್ಶಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!