Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಶುಭಶ್ರೀ ಪ್ರಸಾದ್ ಅವರ ಪುಸ್ತಕಗಳ ಬಿಡುಗಡೆ

ಐಡಿಯಲ್ ಪಬ್ಲಿಕೇಶನ್ಸ್ ಮಂಡ್ಯ, ಪರಿಚಯ ಪ್ರಕಾಶನ ಮಂಡ್ಯ ಮತ್ತು ಮಂಡ್ಯ ಜಿಲ್ಲಾ ಲೇಖಕಿಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿ ಡಾ.ಶುಭಶ್ರೀ ಪ್ರಸಾದ್ ಅವರ ‘ತೆರೆದ ನೋಟ ಹಾಗೂ ಹೊತ್ತಗೆ ಹಿಡಿವ ಹೊತ್ತು’ ಪುಸ್ತಕಗಳ ಬಿಡುಗಡೆ ಸಮಾರಂಭ ಮಂಡ್ಯ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.

ಖ್ಯಾತ ಸಂಶೋಧಕ ಹಾಗೂ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಅವರು ಕಾರ್ಯ ನಿಮಿತ್ತ ಪುಸ್ತಕಗಳನ್ನು ಡಾ.ಶುಭಶ್ರೀ ಪ್ರಸಾದ್ ಅವರ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಮಂಡ್ಯದಲ್ಲೇ ಉದಯೋನ್ಮುಖ ಲೇಖಕಿ ಡಾ.ಶುಭಶ್ರೀ ಮಂಡ್ಯ ಭಾಗದಲ್ಲಿ ಬಹಳಷ್ಷ್ಟು ಹೆಸರು ಮಾಡಿದ್ದಾರೆ. ಇಂದು ಅವರ ಮನೆಯಲ್ಲಿ 2 ಬಂಗಾರದ ಪುಸ್ತಕ ಬಿಡುಗಡೆ ಮಾಡಿದ್ದೇನೆ, ಶುಭಶ್ರೀ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಸಂಜೆ ನಡೆದ ವೇದಿಕೆ ಕಾರ್ಯಕಮವನ್ನು ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಮಾತನಾಡಿ, ಶುಭಶ್ರೀ ನನ್ನ ವಿದ್ಯಾರ್ಥಿನಿ ಬಹುತೇಕ ನನ್ನ ವಿದ್ಯಾರ್ಥಿನಿಯರನ್ನು ನನ್ನ ಶಿಷ್ಯರು ಎಂದು ನಾನು ಹೇಳುವುದಿಲ್ಲ ಅವರು ಸಹ ನನ್ನ ಮಕ್ಕಳು ಎಂದು ಭಾವಿಸಿ ಅವರ ಕೆಲಸಕ್ಕೆ ಬೆನ್ನು ತಟ್ಟುವುದು ಸಂತೋಷದ ಕೆಲಸ ಎಂದರು.

ಪರಿಚಯ ಪ್ರಕಾಶಕರಾದ ಶಿವಕುಮಾರ್ ಆರಾಧ್ಯ ಪುಸ್ತಕ ಕುರಿತು ಮಾತನಾಡಿ, ಒಂದು ಸಣ್ಣ ಕೃತಿಯನ್ನು ಕೊಟ್ಟು ಓದುವ ಹವ್ಯಾಸವನ್ನು ದೊಡ್ಡ ದೊಡ್ಡ ಕೃತಿಗಳ ಪರಿಚಯವನ್ನು ಅದರಲ್ಲಿ ಮಾಡಿಸುವ ಪುಸ್ತಕ ಇದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಮೀರಾಶಿವಲಿಂಗಯ್ಯ, ಈ ಪುಸ್ತಕ ಕುತೂಹಲ ಭರಿತವಾಗಿ ನಮ್ಮ ಮನಸಿನ ಮಾತುಗಳ ಜೊತೆ ಬೆರೆತು ಓದಿಸಿಕೊಂಡು ಹೋಗುತ್ತದೆ ಎಂದು ಹೇಳಿದರು.

ಲೇಖಕಿ ಡಾ.ಶುಭಶ್ರೀ ಪ್ರಸಾದ್ ಮಾತನಾಡಿ, ದೊಡ್ಡ ಮಟ್ಟದಲ್ಲಿ ಅಧ್ಯಯನ ಮಾಡಿ ಪುಸ್ತಕ ಬರಿಯುವ ಗುರಿ ಹೊಂದಿದ್ದೇನೆ ಆದರೆ ಅಲ್ಲಿಯ ತನಕ ಚಲನೆಯಲ್ಲಿ ಇರಲು ಪ್ರತಿವರ್ಷ ಪುಸ್ತಕವನ್ನು ಪ್ರಕಟಿಸುತ್ತ ಬರುತ್ತಿದ್ದೇನೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ