Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣಗುರು ನೀಡಿದ ಕೊಡುಗೆ ಅಪಾರ : ಡಾ.ಕುಮಾರ

ಯಾವುದೇ ರೀತಿಯ ಕ್ರಾಂತಿ ಮಾಡದೆ ಸಮಾಜಕ್ಕೆ ತಮ್ಮದೇ ಆದ ತತ್ವ ಆದರ್ಶಗಳ ಮೂಲಕ ಸಮಾಜಕ್ಕೆ ಅನೇಕ ಕೊಡುಗೆ ಕೊಟ್ಟವರು ದಾರ್ಶನಿಕ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಮಂಡ್ಯನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಈಡಿಗರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂತ ಬ್ರಹ್ಮ ಶ್ರೀನಾರಾಯಣಗುರುಜೀ ಅವರು ಪ್ರತಿಯೊಬ್ಬರೂ ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಬೇಕು ಎಂದು ಪ್ರತಿಪಾದಿಸಿದರು, ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಬ್ರಹ್ಮ ಶ್ರೀ ನಾರಾಯಣಗುರು ಅವರ ತತ್ವ ಮತ್ತು ಆದರ್ಶ ಸಮಾಜಕ್ಕೆ ಪ್ರಸ್ತುತ ಸಮಾಜದಲ್ಲಿ ಅವಶ್ಯಕವಾಗಿದೆ. ಕೇವಲ ಒಂದು ದಿನಕ್ಕೆ ಅವರ ಜಯಂತಿ ಸಿಮೀತವಾಗಬಾರದು ಬದಲಾಗಿ ನಮ್ಮ ವೈಯಕ್ತಿಕ ಜೀವನದಲ್ಲಿ ಅವರ ಭೋಧನೆ, ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಹಿಂದಿನ ಕಾಲದಲ್ಲಿ ಅಸ್ಪೃಶ್ಯತೆ, ಮೇಲು- ಕೀಳು ಎಂಬ ಮನೋಭಾವನೆ ಇರುವ ವರ್ಗದ ವಿರುದ್ಧ ಪ್ರತಿಭಟಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಸಂತ ಬ್ರಹ್ಮ ಶ್ರೀ ನಾರಾಯಣಗುರುಗಳು ಎಂದು ತಿಳಿಸಿದರು.

ಶಿಕ್ಷಕರು ಹಾಗು ಜಿಲ್ಲಾ ಆರ್ಯ ಈಡಿಗರ ಸಂಘದ ಸಹ ಕಾರ್ಯದರ್ಶಿ ಮಾದೇವ ಅವರು ಮಾತನಾಡಿ, ವಿಗ್ರಹಗಳ ಪೂಜೆ ನಿರಾಕರಿಸಿ ಮಾನವರಲ್ಲಿ ದೇವರನ್ನು ಕಂಡವರು ನಾರಾಯಣಗುರುಗಳು. ಹಲವು ಸಾಮಾಜಿಕ ಚಳುವಳಿಗಳನ್ನು ನಡೆಸಿ ಮನುಕುಲದ ಒಳಿತಿಗಾಗಿ ಶ್ರಮಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್, ನಗರಸಭೆ ಉಪಾಧ್ಯಕ್ಷ ಎಂ.ಪಿ ಅರುಣ್ ಕುಮಾರ್, ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಸಂದೇಶ್, ಮುಖಂಡರಾದ ವೆಂಕಟಗಿರಿಯ್ಯ‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ