ವಿಶ್ವ ಅಂಗಾಂಗ ದಾನ ದಿನದ ದಿನಾಚರಣೆಯ ಅಂಗವಾಗಿ ‘ಬಿಜಿಎಸ್ ವಾಕ್ ಫಾರ್ ಲೈಫ್’ ಎಂಬ ವಿನೂತನ ಜಾಥಾ ಸೆ.19ರಂದು ಶುಕ್ರವಾರ ಆದಿಚುಂಚನಗಿರಿಯ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಲಿದ್ದು ಈ ನಡಿಗೆ ಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ ತಿಳಿಸಿದರು.
ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಕೃಷಿ ಪ್ರಧಾನ ಪ್ರದೇಶದಲ್ಲಿ ಬಡವರ ಆರೋಗ್ಯ ರಕ್ಷಣೆ ಘೋಷಣೆಯ ಉದ್ದೇಶಗಳಿಂದ ಸ್ಥಾಪಿತವಾಗಿರುವ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯವು ವಿವಿಧ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಸುತ್ತಿವೆ. ವಿವಿಧ ರೀತಿಯ ಶಸ್ತ್ರ ಚಿಕಿತ್ಸೆಗಳ ವಿಭಾಗಗಳು ಆರಂಭಗೊಳ್ಳುತ್ತಿದ್ದು ಗ್ರಾಮೀಣ ಭಾಗದ ಜನರಲ್ಲಿ ಅಂಗಾಂಗ ದಾನದ ಜಾಗೃತಿ ಜಾಥ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ದಿವ್ಯ ಸಾನಿಧ್ಯವನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಲಿದ್ದು ಅವರೊಂದಿಗೆ ವಿವಿಧ ರಂಗಗಳಲ್ಲಿನ ಮುಖಂಡರು, ಸಿನಿಮಾ ನಟರು, ಕ್ರೀಡಾ ವಿಭಾಗದ ಮುಖ್ಯಸ್ಥರು, ಗಣ್ಯರು ಪಾಲ್ಗೊಳ್ಳುವರು. ಈ ಜಾಥದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸುವ ಮುಖಾಂತರ ಜಾಗೃತಿ ಮೂಡಿಸಲಿದ್ದಾರೆ
ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಹಾಗೂ ಧರ್ಮೇಂದ್ರ ಉಪಸಿತರಿದ್ದರು




