ರಾಜ್ಯದ ಜನರ ತೀವ್ರ ಕುತೂಹಲ ಕೆರಳಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರ ಪರ ಚಿತ್ರನಟ ದುನಿಯಾ ವಿಜಯ್ ಶುಕ್ರವಾರ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಅಪಾರವಾದ ಜನಸ್ತೋಮ ಸೇರಿತ್ತು.
ನಟ ದುನಿಯಾ ವಿಜಿ, ನಟಿ ನಿಶ್ವಿಕಾ ನಾಯ್ಡು ಅವರು ಇಂದು ವರುಣಾ ವಿಧಾನಸಭೆ ಕ್ಷೇತ್ರದ ಚಿಕ್ಕಹಳ್ಳಿ, ಬುಗತಗಳ್ಳಿ ಹಾಗೂ ವಾಜಮಂಗಲ ಗ್ರಾಮಗಳಲ್ಲಿ ನನ್ನೊಂದಿಗೆ ರೋಡ್‌ಶೋ ನಲ್ಲಿ ಪಾಲ್ಗೊಂಡು, ಪ್ರಚಾರದ ರಂಗೇರಿಸಿದರು.
“ಸಿದ್ದರಾಮಯ್ಯ ಗೆಲ್ಲಬೇಕು, ಅವರು ನಮ್ಮವರು” ಎಂಬ ನನ್ನ ಮೇಲಿರುವ ಪ್ರೀತಿ ಅಭಿಮಾನದ ಕಾರಣಕ್ಕೆ ಇಷ್ಟುದೂರ ಬಂದು ಹಲವು ಗಂಟೆಗಳ… pic.twitter.com/BqjNCGJMRm
— Siddaramaiah (@siddaramaiah) May 5, 2023
“>
ನಿನ್ನೆಯಷ್ಟೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರಾದ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್, ನಟಿರಾದ ರಮ್ಯಾ, ನಿಶ್ವಿಕಾ ನಾಯ್ದು ಅವರ ವರುಣದಲ್ಲಿ ಸಿದ್ದರಾಮಯ್ಯ ಪರ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ನಾಯಕ ನಟ ನಟಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು, ಇದು ಕಾಂಗ್ರೆಸ್ ನಾಯಕರ ಹುಮ್ಮಸ್ಸನ್ನು ಇಮ್ಮಡಗೊಳಿಸಿತ್ತು.
ಇಂದು ನಟ ದುನಿಯಾ ವಿಜಿ, ನಟಿ ನಿಶ್ವಿಕಾ ನಾಯ್ಡು ಅವರು ಇಂದು ವರುಣಾ ವಿಧಾನಸಭೆ ಕ್ಷೇತ್ರದ ಚಿಕ್ಕಹಳ್ಳಿ, ಬುಗತಗಳ್ಳಿ ಹಾಗೂ ವಾಜಮಂಗಲ ಗ್ರಾಮಗಳಲ್ಲಿ ನನ್ನೊಂದಿಗೆ ರೋಡ್‌ಶೋ ನಲ್ಲಿ ಪಾಲ್ಗೊಂಡು, ಪ್ರಚಾರದ ರಂಗೇರಿಸಿದರು. “ಸಿದ್ದರಾಮಯ್ಯ ಗೆಲ್ಲಬೇಕು, ಅವರು ನಮ್ಮವರು” ಎಂದು ಪ್ರಚಾರ ಮಾಡಿದರು.
ನನ್ನ ಮೇಲಿರುವ ಪ್ರೀತಿ ಅಭಿಮಾನದ ಕಾರಣಕ್ಕೆ ಇಷ್ಟುದೂರ ಬಂದು ಹಲವು ಗಂಟೆಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ವಿಜಿಗೆ ಧನ್ಯವಾದಗಳು. ನಿಮ್ಮ ಈ ಕೋರಿಕೆಯನ್ನು ವರುಣಾದ ನನ್ನ ಜನ ಖಂಡಿತಾ ಈಡೇರಿಸುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




