Wednesday, November 18, 2026

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ.ಚೌಡಯ್ಯ ಕೊಡುಗೆ ಅಪಾರ : ಕೆ. ಎಸ್. ರಂಗಪ್ಪ

ಎಚ್.ಡಿ.ಚೌಡಯ್ಯ ಅವರು ನಡೆದು ಬಂದ ಹಾದಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆಯನ್ನು ಮರೆಯಲಾಗುವುದಿಲ್ಲ. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಮೌಲ್ಯಯುತವಾದ ಒಂದು ಕಾಯಕ ಎಂದು ಕರ್ನಾಟಕ ಮುಕ್ತ ವಿ.ವಿ. ವಿಶ್ರಾಂತ ಕುಲಪತಿ, ಅಂತಾರಾಷ್ಟ್ರೀಯ ವಿಜ್ಞಾನಿ ಕೆ.ಎಸ್.ರಂಗಪ್ಪ ಶ್ಲಾಘಿಸಿದರು.

ಮಂಡ್ಯ ನಗರದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಎಚ್.ಡಿ.ಚೌಡಯ್ಯ ಅವರ ೯೮ನೇ ಜನ್ಮದಿನಾಚರಣೆ ಹಾಗೂ ೨೦೨೫ನೇ ಸಾಲಿನ ರಾಜ್ಯಮಟ್ಟದ ಎಚ್.ಡಿ.ಚೌಡಯ್ಯ ಶಿಕ್ಷಣ, ಸಹಕಾರ ಮತ್ತು ಕ್ರೀಡಾ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಚೌಡಯ್ಯ ಪ್ರಶಸ್ತಿ ಪಡೆದುಕೊಂಡಿರುವ ರಾಮಸ್ವಾಮಿ ಅವರನ್ನು ಹತ್ತಿರದಿಂದ ಕಂಡಿದ್ದೇನೆ, ಜನತಾ ಶಿಕ್ಷಣ ಸಂಸ್ಥೆಯು ಒಳ್ಳೆಯ ವ್ಯಕ್ತಿ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿಗೆ ಲಾಭಿ ನಡೆಸುವವರನ್ನು ನಾವು ಕಂಡಿದ್ದೇವೆ, ಪ್ರಸ್ತುತದಲ್ಲಿ ಪ್ರಶಸ್ತಿಗಳಿಗೆ ಗೌರವ ಇಲ್ಲದ ಸ್ಥಿತಿಗೆ ತಲುಪಿದ್ದೇವೆ, ಆದರೆ ಇದಕ್ಕೆ ವಿರುದ್ಧವಾಗಿ ಜನತಾ ಶಿಕ್ಷಣ ಟ್ರಸ್ಟ್ನವರು ಯೋಗ್ಯರಿಗೆ ಪ್ರಶಸ್ತಿ ನೀಡುತ್ತಿರುವುದರಿಂದಲೇ ಈ ಸಂಸ್ಥೆಯ ಮೇಲೆ ಅಪಾರ ಗೌರವವಿದೆ ಎಂದು ಶ್ಲಾಘಿಸಿದರು.

ಎಚ್.ಡಿ.ಚೌಡಯ್ಯ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಕೆ.ರಾಮಸ್ವಾಮಿ ಅವರು, ಕೆ.ವಿ.ಶಂಕರಗೌಡ ಅವರು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆಯನ್ನು ಮಂಡ್ಯ ಜಿಲ್ಲೆಯಲ್ಲಿ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯದ ಕೆಲಸ. ಇವರ ಅವಧಿಯಲ್ಲಿ ವಿಶ್ವಕೋಶವು ರೂಪುಗೊಳ್ಳುತ್ತದೆ, ರಾಜ್ಯ ವಿಜ್ಞಾನ ಸಂಸ್ಥೆ, ವಯಸ್ಕರ ಶಿಕ್ಷಣ ಎಂಬAತೆ ಹಲವು ಬದಲಾವಣೆಯನ್ನು ನಾವು ಕಂಡಿದ್ದೇವೆ. ಗಾಂಧೀಜಿಯವರ ಪರಿಕಲ್ಪನೆಯಂತೆ ಬದುಕಿದ್ದರು, ಅದೇ ಹಾದಿಯಲ್ಲಿ ಚೌಡಯ್ಯ ಅವರು ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜನತಾ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಶ್ರೀಧರ್, ಚೌಡಯ್ಯ ಅವರ ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ. ನೇರ ನುಡಿಯುಳ್ಳ ಚೌಡಯ್ಯ ಅವರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಸಹಕಾರ ಚಳವಳಿ ಸೇರಿದಂತೆ ಹುಟ್ಟು ಹೋರಾಟಗಾರರಂತೆಯೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಸ್ಥೆ ಹಾಗೂ ವ್ಯಕ್ತಿಗಳಾದ ಎಂ.ಕೆ.ರಾಮಸ್ವಾಮಿ (ಎಚ್.ಡಿ.ಚೌಡಯ್ಯ ಶಿಕ್ಷಣ), ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಚ್.ಡಿ.ಚೌಡಯ್ಯ ಸಹಕಾರ) ವಿಲ್ಫೆçಡ್ ಡಿಸೋಜ ಅವರಿಗೆ ಎಚ್.ಡಿ.ಚೌಡಯ್ಯ ಕ್ರೀಡಾ ಪ್ರಶಸ್ತಿ, ತಲಾ ೨೦ ಸಾವಿರ ಹಾಗೂ ಎಚ್.ಪಿ.ಲಲಿತ್, ಎಚ್.ಎಂ.ಪ್ರಜ್ವಲ್, ಕೆ.ಎಸ್.ಪುಣ್ಯಶ್ರೀ, ಎಚ್.ಸಿ.ಚೇತನ್‌ಗೌಡ ಅವರಿಗೆ ತಲಾ ೫ ಸಾವಿರದೊಂದಿಗೆ ೨೦೨೫ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ