ಪ್ರಸ್ತುತ ದಿನಗಳಲ್ಲಿನ ಭಾರತ ಸ್ವಾವಲಂಬಿ ಮತ್ತು ಸದೃಢ ದೇಶವಾಗಲು ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಬೇಕು ಎಂದು ಜಿಲ್ಲಾ ಬಿಜೆಪಿ ನಗರಾಧ್ಯಕ್ಷ ವಸಂತಕುಮಾರ್ ಹೇಳಿದರು.
ಮಂಡ್ಯ ನಗರದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ, ಮಂಡ್ಯ ಜಿಲ್ಲಾ ಸಮಿತಿ ಮತ್ತು ನಗರ ಘಟಕ ಆಯೋಜಿಸಿದ್ದ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಭಾರತ ದೇಶ ಆರ್ಥಿಕವಾಗಿ ಪ್ರಬಲವಾಗಿ ಬೆಳೆಯುತ್ತಿದೆ ಸ್ವದೇಶಿ ವಸ್ತುಗಳ ಬಳಕೆಗೆ ಮತ್ತು ವ್ಯಾಪಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ವಿದೇಶಿ ವಸ್ತುಗಳ ಆಮದು ಮತ್ತು ಖರೀದಿಗೆ ಹೆಚ್ಚು ಆಸಕ್ತಿ ತೋರುವುದಿಲ್ಲ ಎಂದು ತಿಳಿಸಿದರು.
ಐವತ್ತು ವರ್ಷ ಭಾರತ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ವಿದೇಶಿ ವಸ್ತುಗಳ ಆಮದು ಮಾಡಿಕೊಂಡು ಭಾರತ ದೇಶದ ರೂಪಾಯಿ ಮೌಲ್ಯವನ್ನು ಕುಸಿತದಲ್ಲಿ ಇರುವಂತೆ ಮಾಡಿತ್ತು ಎಂದು ಕಿಡಿ ಕಾರಿದರು.
ತಂತ್ರಜ್ಞಾನ ಆಹಾರ ಉತ್ಪಾದನೆ ನ್ಯಾಯದಾನ ವ್ಯವಸ್ಥೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅನೇಕ ಸುಧಾರಣೆಗಳನ್ನು ತರಲಾಗಿದ್ದು ಆತ್ಮನಿರ್ಬರ ಸಕಾರವಾಗಿದೆ ಜನರಲ್ಲಿ ಜಾಗೃತಿ ಮೂಡಿಸಿ ಸದೃಢ ರಾಷ್ಟ್ರ ಕಟ್ಟಲು ಪ್ರೇರಣೆಯಾಗಬೇಕಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ. ಸಿದ್ದರಾಮಯ್ಯ, ಎಂ ಬಿ ರಮೇಶ್, ವಿವೇಕ್, ಪ್ರಸನ್ನ, ಕ್ರಾಂತಿ ಮಂಜು, ಅಂಕರಾಜು, ಭೀಮೇಶ್ ಹಲವರು ಹಾಜರಿದ್ದರು




