Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕಾಮಗಾರಿ ಆರಂಭಿಸದ ಸ್ಲಂ ಬೋರ್ಡ್ ಎದುರು ಕಾಳಿಕಾಂಬ ಶ್ರಮಿಕರ ಪ್ರತಿಭಟನೆ

ಮಂಡ್ಯನಗರದ ಕಾಳಿಕಾಂಭ ಶ್ರಮಿಕ ನಗರದ ವಿಚಾರವಾಗಿ ಕಳೆದ ಸೆ.19 ಉಚ್ಚ ನ್ಯಾಯಾಲಯವು ಶ್ರಮಿಕ ಜನರ ಪರವಾಗಿ ತೀರ್ಪು ನೀಡಿದ್ದು ತಿಂಗಳುಗಳೇ ಸಮೀಪಿಸಿದ್ದರೂ ಸಹ 39 ಮನೆಗಳ ಕಾಮಗಾರಿಯನ್ನು ಪ್ರಾರಂಭಿಸದಿರುವ ಮಂಡ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯ ಖಂಡಿಸಿ ಶ್ರಮಿಕ ನಿವಾಸಿಗಳು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಹಾಗೂ  ಮಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ನೇತೃತ್ವದಲ್ಲಿ ಮಂಡ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.

2018 ರಿಂದ 2025 ವರೆಗೆ ಸುದೀರ್ಘ ಸಮಯ ಹೈಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ಕಾಳಿಕಾಂಭ ಸೇವಾ ಸಮಿತಿಯ ರಿಟ್ ಅರ್ಜಿಯನ್ನು ಕಳೆದ ಸೆ.19 ರಂದು ಉಚ್ಚ ನ್ಯಾಯಾಲಯ ವಜಾ ಮಾಡಿ, ಜನರ ಪರವಾಗಿ ತೀರ್ಪು ನೀಡಿ ತಿಂಗಳೇ ಸಮೀಪಿಸುತ್ತಿದ್ದರೂ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಮನೆಗಳ ಕಾಮಗಾರಿಯನ್ನು ಪ್ರಾರಂಭಿಸದೆ ಮತ್ತೆ ವಿಳಂಳ ಮಾಡುತ್ತಿದ್ದಾರೆ ಎಂದು ದೂರಿದರು.

2006 ರಿಂದ ಕಾಳಿಕಾಂಭದ ಜನರು ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ 2025ರ ತನಕ 2 ದಶಕಗಳ ಕಾಲ ತಾವು ವಾಸಮಾಡುತ್ತಿರುವ ಜಾಗವನ್ನು ಉಳಿಸಿಕೊಳ್ಳಲು 39 ಕುಟುಂಬಗಳು 3 ತಲೆಮಾರುಗಳ ಕಾಲ ಸುದೀರ್ಘ ಹೋರಾಟ ಮಾಡಿ ತಮ್ಮ ಹಕ್ಕಿನ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಪಡೆಯಲು 20 ವರ್ಷಗಳು ಉರುಳಿವೆ. ಮನೆಯ ಕನಸನ್ನು ಕಂಡ ಅದೆಷ್ಟೋ ಹಿರಿಯರು ಅಗಲಿದ್ದಾರೆ. ಆದರೂ ಇಂದಿಗೂ ಸಹ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಟ ತಪ್ಪಿಲ್ಲ ಎಂದು ಅಳಲು ತೋಡಿಕೊಂಡರು.

ದೇವಸ್ಥಾನದ ಪಕ್ಕದಲ್ಲಿ ಕೊಳಗೇರಿ ನಿವಾಸಿಗಳು ವಾಸಮಾಡಬಾರದು ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ ಎಂಬ ಕಾಳಿಕಾಂಭ ಸೇವಾ ಸಮಿತಿಯ ಆಕ್ಷೇಪಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಕಾಳಿಕಾಂಭ ಸೇವಾ ಸಮಿತಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾ ಗೊಳಿಸಿ ಮತ್ತೆ ಬಡಜನರ ಪರವಾದ ನ್ಯಾಯವನ್ನು ಎತ್ತಿ ಹಿಡಿದು ಜನರ ನಂಬಿಕೆಗೆ ಮತ್ತಷ್ಟು ಬಲ ತುಂಬಿದ್ದಾರೆ. ಹೈಕೋರ್ಟ್ ತೀರ್ಪು ಬಂದ ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕೆಂದು ಮಂಡ್ಯದ ಜಿಲ್ಲಾಧಿಕಾರಿಗಳು ಸೂಚಿಸಿದರೂ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯ ಕಾರ್ಯದರ್ಶಿ ಸಿದ್ದರಾಜು, ಶ್ರಮಿಕರಾದ ಗೀತಾ, ಮಹೇಶ್ವರಿ, ಶಶಿಕಲಾ, ಹರೀಶ, ನಿಂಗಮ್ಮ, ಲಕ್ಷ್ಮಿ, ಗಣೀಶ ಹಾಗೂ ಗೋಪಾಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ