ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗವಾಯಿ ಅವರ ಮೇಲೆ ಶೂ ಎಸೆದು ವಿಕೃತಿ ಮೆರೆದಿರುವ ಆರೋಪಿ ವಕೀಲನ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಹಿರಿಯ ಸದಸ್ಯ ಡಿ. ಪ್ರೇಮಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ವಿಕೃತಿ ಮನಸ್ಥಿತಿ, ಕೋಮುವಾದಿ ವಕೀಲನೊಬ್ಬ ಕೋರ್ಟಿನ ಹಾಲ್ ನಲ್ಲಿಯೇ ಶೂ ಎಸೆದು ಅವಮಾನ ಮಾಡಿರುವುದನ್ನು ಖಂಡಿಸಿ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಾರ್ಯ ಸೌಧದ ಮುಂಭಾಗದಲ್ಲಿ
ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಡಾ.ಅಶೋಕ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪುರಸಭೆ ಹಿರಿಯ ಸದಸ್ಯರಾದ ಡಿ.ಪ್ರೇಮಕುಮಾರ್, ದಲಿತ ಮುಖಂಡರಾದ ರಾಜಯ್ಯ, ಮಾಂಬಳ್ಳಿ ಜಯರಾಮ್, ಸಿಂಧಘಟ್ಟ ಸೋಮಸುಂದರ್, ರಾಮದಾಸ್, ಶಿವಪ್ರಸಾದ್, ಪ್ರದೀಪ್, ಉಮೇಶ್, ಅಂಚನಹಳ್ಳಿ ಶಶಿ, ಊಚನಹಳ್ಳಿ ನಟರಾಜ್, ತೆಂಡೇಕೆರೆ ನಿಂಗಯ್ಯ, ಹರಿಹರಪುರ ನರಸಿಂಹ, ಜಕ್ಕನಹಳ್ಳಿ ರಾಜೇಶ್, ಡಾ.ಬಸ್ತಿರಂಗಪ್ಪ, ಲಕ್ಷ್ಮೀಪುರ ರಂಗಸ್ವಾಮಿ, ಚೌಡೇನಹಳ್ಳಿ ದೇವರಾಜು, ಕಿಕ್ಕೇರಿ ರಾಜಣ್ಣ, ಚಿಕ್ಕಗಾಡಿಗನಹಳ್ಳಿ ಬಸವೇಶ, ಕೃಷ್ಣಾಪುರ ಗಿರೀಶ್, ನಾಟನಹಳ್ಳಿ ರಮೇಶ್, ಮಂಜು, ಜೈನಹಳ್ಳಿ ಹರೀಶ್, ಕೃಷ್ಣರಾಜಪೇಟೆ ಗಂಗಾಧರ್, ಬಸ್ತಿ ಪವಿ, ಮುದುಗೆರೆ ಮಹೇಂದ್ರ, ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




