ವರದಿ : ಪ್ರಭು ವಿ ಎಸ್
ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಆಯಾ ಪಕ್ಷಗಳ ಹಣೆಬರಹ ಕಾರ್ಯಕರ್ತರ ಕೈಯಲ್ಲಿದ್ದು ಇದಕ್ಕೆ ಉದಾಹರಣೆ ಎಂಬಂತೆ ಮಂಡ್ಯ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯ ಅಭೂತಪೂರ್ವ ಗೆಲುವೇ ಸಾಕ್ಷಿಯೆಂದು ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ಮದ್ದೂರು ಪಟ್ಟಣದ ಶಿವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಎಂ.ಡಿ.ಸಿ.ಸಿ
ಬ್ಯಾಂಕ್ಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷ ಬೆಂಬಲಿತ ನಿರ್ದೇಶಕರುಗಳ ಅಭಿನಂದನಾ
ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಹಿರಿಯ ಸಹಕಾರಿ ದುರೀಣ ಕೆ.ಬಿ.ಶಂಕರ ಗೌಡ ರಿಂದ ಸ್ಥಾಪಿಸಲ್ಪಟ್ಟ ಎಂ.ಡಿ.ಸಿ.ಸಿ ಬ್ಯಾಂಕ್ನ ಚುನಾವಣಾ ಇತಿಹಾಸದಲ್ಲೇ ಯಾವುದೇ ಪಕ್ಷ 11 ಸ್ಥಾನ ಪಡೆದ ಉದಾಹರಣೆ ಇಲ್ಲವೆಂದ ಅವರು ಪ್ರಸ್ತುತ ಲಭ್ಯವಿರುವ ಅಭೂತಪೂರ್ವ ಹಾಗೂ ವಿಶೇಷ ಜಯವನ್ನು ಕಾಂಗ್ರೆಸ್ ಅಭ್ಯರ್ಥಿಗಳು ತಂದುಕೊಟ್ಟಿರುವುದು ಪಕ್ಷದ ಕಾರ್ಯಕ್ರಮಗಳಿಗೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಹಿರಿಮೆ ತಂದಿದೆ ಎಂದರು.

ಕೃಷಿ ಸಚಿವರಾದ ಮೇಲೆ ಜಿಲ್ಲೆಗೆ ಕೃಷಿ ವಿಶ್ವ ವಿದ್ಯಾನಿಲಯ ಮಂಜೂರು, ನಿಂತು ನೆನೆಗುದಿಗೆ ಪ್ರತಿಷ್ಠಿತ ಮೈಷುಗರ್ ಕಾರ್ಖಾನೆ ಪುನರಾರಂಭ, ಇನ್ನಿತರ ಅಭಿವೃದ್ಧಿಗಳಿಗೆ ಒತ್ತು ನೀಡಿದ್ದು ಇದಕ್ಕೆ ಜಿಲ್ಲೆಯ ಕಾರ್ಯಕರ್ತರ ಮತ್ತು ಚುನಾಯಿತ ಪ್ರತಿನಿಧಿಗಳ ಸಹಕಾರ ಕಾರಣವೆಂದರು.
ಸುಳ್ಳಿನ ಸರದಾರ ಎಚ್.ಡಿ.ಕುಮಾರಸ್ವಾಮಿ
ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ 7 ರಿಂದ 10 ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳಾಗಿದ್ದು ಇದನ್ನು ಬಣ್ಣಿಸದ ಸುಳ್ಳಿನ ಸರದಾರ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರಕಾರದ ವಿರುದ್ಧವೇ ವ್ಯಂಗ್ಯವಾಡುತ್ತಿರುವುದಾಗಿ ಟೀಕಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ
ಶಾಸಕ ಕೆ.ಎಂ.ಉದಯ ಮಾತನಾಡಿ ಮದ್ದೂರು ತಾಲೂಕು ವ್ಯಾಪ್ತಿಯ ಮೂರು ವ್ಯಕ್ತಿಗಳು ಸೇರಿದಂತೆ ಜಿಲ್ಲೆಯ
ಒಟ್ಟು 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿದ್ದು ಮುಂದಿನ ದಿನಗಳಲ್ಲಿ ಇಂತಹ ಗೆಲುವುಗಳು ಅಭಿವೃದ್ಧಿಗೆ ಆಧಾರವೆಂದು ಬಣ್ಣಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಇದೇ ರೀತಿ ಒಗ್ಗಟ್ಟು ಪ್ರದರ್ಶನದ ಮೂಲಕ ಪಕ್ಷದ ಆಭ್ಯರ್ಥಿಗಳ ಆಯ್ಕೆಗೆ ಶ್ರಮಿಸುವಂತೆ ಮದ್ದೂರು ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಮಾರೋಪಾದಿಯಲ್ಲಿ ಸಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಡುವಂತೆ ಮನವಿ ಮಾಡಿದರು.
ಅಭಿನಂದನೆ
ಡಿ.ಸಿ.ಸಿ ಬ್ಯಾಂಕ್ಗೆ ನೂತನವಾಗಿ ಆಯ್ಕೆಯಾದ ಚಲುವರಾಜು, ಪಿ.ಸಂದರ್ಶ, ಜೋಗಿಗೌಡ, ಸಚಿನ್ಚಲವರಾಯಸ್ವಾಮಿ ಸೇರಿದಂತೆ ಇತರೆ ಸದಸ್ಯರನ್ನು ಕಾರ್ಯಕ್ರಮದ ವೇಳೆ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಅಭಿನಂದಿಸಿ ಗೌರವಿಸಿದರು.
ವಿಧಾನ ಪರಿಷತ್ ಸದಸ್ಯ, ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳೀಗೌಡ,
ಮನ್ಮುಲ್ ಅಧ್ಯಕ್ಷ ಶಿವಪ್ಪ, ಜಿಲ್ಲಾ ಕಾಂಗ್ರೆಸ್ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಿಸಾನ್
ಕಾಂಗ್ರೇಸ್ ಘಟಕದ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನ್ಕುಮಾರ್, ಮುಖಂಡರಾದ ಸುರೇಶ್ಕಂಠಿ, ಚಿದಂಬರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಣ್ಣೂರು ರಾಜೀವ್,
ಅಜ್ಜಹಳ್ಳಿ ರಾಮಕೃಷ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾಶಂಕರೇಗೌಡ ಇತರರಿದ್ದರು.




