ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಶೆಟ್ಟಿ ಬಣ ಮಂಡ್ಯ ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಲಕಾವೇರಿ ಯಾತ್ರೆಗೆ ಮಂಡ್ಯ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ರಾಮಚಂದ್ರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ೧೮ ವರ್ಷಗಳಿಂದ ಕರವೇ ಸಂಘಟನೆ ಹಮ್ಮಿಕೊಂಡಿರುವ ತಲಕಾವೇರಿ ಯಾತ್ರೆಯು, ಮಂಡ್ಯ ಕಾಳಿಕಾಂಭ ದೇವಸ್ಥಾನದಿಂದ ಹೊರಟು ಕುಶಾಲನಗರದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಭಾಗಮಂಡಲದ ಶ್ರೀಭಗಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರದ ತಲಕಾವೇರಿಗೆ ತೆರಳಿ ಸೈನಿಕರು, ರೈತರಿಗೆ, ಮಂಡ್ಯ ಜಿಲ್ಲೆಯ ಜನತೆಗೆ ಕಾವೇರಿ ತಾಯಿ ಆಶೀರ್ವದಿಸಲೆಂದು ಪೂಜೆ ಸಲ್ಲಿಸಲು ಹೊರಟಿರುವುದು ಶ್ಲಾಘನೀಯ ಎಂದರು.
ಇಂತಹ ಸೇವಾ ನಿರತ ಕಾರ್ಯಕರ್ತರಿಗೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ, ಎಲ್ಲರಿಗೂ ಕಾವೇರಿ ತಾಯಿ ಒಳಿತು ಮಾಡಿ ಆಶೀರ್ವದಿಸಲಿ, ನಾಡು-ನುಡಿ ಜಲ ನೆಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಡಿ ಅಶೋಕ್, ಶ್ರೀನಿವಾಸ್ ರಾಜೇಶ್ ಕಾರ್ತಿಕ್ ಹಾಗೂ ಹೊಳಲು ಗ್ರಾಮಸ್ಥರು ಹಾಜರಿದ್ದರು.




