Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನ.15 ಕ್ಕೆ ಕನ್ನಡ ಜಾಗೃತಿ ಸಮಾವೇಶ – ಕನ್ನಡ ರಾಜ್ಯೋತ್ಸವ

ಕನ್ನಡಸೇನೆಯ ವತಿಯಿಂದ ಕನ್ನಡ ಜಾಗೃತಿ ಸಮಾವೇಶ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.೧೫ರ ಬೆಳಿಗ್ಗೆ ೧೧ ಗಂಟೆಗೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ತಿಳಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಕನ್ನಡ ನಾಡು, ನುಡಿ, ಜಲ ಸಂಬಂಧ ತೆಗೆದುಕೊಳ್ಳಲಾಗುವ  ನಿರ್ಣಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.

ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಲೋಕಾಯುಕ್ತ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಉದ್ಘಾಟಿಸುವರು. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಪಿ.ರವಿಕುಮಾರ್ ಗೌಡ ಅವರುಗಳು ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವರು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕನ್ನಡ ಜಾಗೃತಿ ಜಾಥ ಮೆರವಣಿಗೆಗೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಚಲನಚಿತ್ರ ನಟ ಟಿನ್ನಿಸ್ ಕೃಷ್ಣ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ನಾಗೇಶ್, ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು, ಕನ್ನಡಸೇನೆ ಕಾರ್‍ಯಾಧ್ಯಕ್ಷ ಮುನಿಕೃಷ್ಣ, ರಾಜ್ಯ ಉಪಾಧ್ಯಕ್ಷ ಜಿ.ಮುನಿರಾಜುಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ಶಿವಲಿಂಗು, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಕರ್, ಇಂಡುವಾಳು ಸಹಕಾರ ಸಂಘದ ಅಧ್ಯಕ್ಷ ಎಸ್.ಸಿದ್ದೇಗೌಡ, ಸಮಾಜ ಸೇವಕರಾದ ವಿಷಕಂಠ, ನೂರ್ ಅಹಮ್ಮದ್, ಪ್ರದೀಪ್, ಯುವ ಮುಖಂಡರಾದ ಅಭೀಜಿತ್‌ನಂದ, ಜೆ.ಕೆ.ಕಾಂತ, ನಿರಂಜನ್ ವಸಂತ್‌ರಾಜ್, ಆರ್.ಜೆ.ಜಯಪ್ರಕಾಶ್, ಪ್ರಥಮ ದರ್ಜೆ ಗುತ್ತಿಗೆದಾರ ಹರ್ಷ ಬೀರಗೌಡನಹಳ್ಳಿ, ಕಾಂಗ್ರೆಸ್ ಮುಖಂಡ ಡಿ.ಆರ್.ಚಂದ್ರಶೇಖರ್ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.

ತುಮಕೂರು ಪಿಡಬ್ಲ್ಯೂಡಿ ಕಾರ್‍ಯಪಾಲಕ ಅಭಿಯಂತರ ರಾಜಣ್ಣ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾದ ಕಾರ್ಯಪಾಲಕ ಅಭಿಯಂತರ ಎನ್.ಜಿ.ಪ್ರಮೋದ್‌ಕುಮಾರ್, ಮೇಲುಕೋಟ ಅರ್ಚಕ ಬಿ.ವಿ.ಆನಂದ್ ಆಳ್ವಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕನ್ನಿಕ-ಶಿಲ್ಪ ನವೋದಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಎಚ್.ಆರ್.ಕನ್ನಿಕ, ಕಂದಾಯ ಆರಕ್ಷಕ ಆರ್.ಕುಮಾರಸ್ವಾಮಿ, ಕನ್ನಡ ಸೇನೆಯ ರಾಜ್ಯ ಸಂಘನಾ ಕಾರ್ಯದರ್ಶಿ ಸಮಾಜ ಸೇವಕ ಮುನಾವರ್ ಪಾಷ, ಸಮಾಜ ಸೇವಕ ಎನ್.ರಂಗಸ್ವಾಮಿ, ಅಂತರಾಷ್ಟ್ರೀಯ ಕ್ರೀಡಾಪಟು ಬಿ.ಎಸ್.ಮಾನ್ಯ, ನೆಲದನಿ ಸಂಸ್ಥೆಯ ಎಂ.ಸಿ.ಲಂಕೇಶ್ ಅವರುಗಳಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಮಂಡ್ಯ ನಗರದ ಮಳಿಗೆಗಳಲ್ಲಿ ಶೇ.೪೦ರಷ್ಟು ಮಳಿಗೆಗಳು ಕನ್ನಡ ನಾಮಫಲಕ ಅಳವಡಿಸಿಲ್ಲ. ಈ ಸಂಬಂಧ ಹೋರಾಟದ ಫಲವಾಗಿ ನ.೧೫ರೊಳಗೆ ಅಳವಡಿಕೆಗೆ ನಗರಸಭೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಶೇ.೧೦೦ ರಷ್ಟು ನಗರದ ಮಳಿಗೆಗಳು ಕನ್ನಡ ನಾಮಫಲಕ ಅಳವಡಿಸದಿದ್ದರೆ ನಿರಂತರ ಹೋರಾಡದ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರಾಜ್ಯ ಸಂಚಾಲಕ ಜಿ.ಮಹಂತಪ್ಪ, ಜಿಲ್ಲಾ ಯುವ ಅಧ್ಯಕ್ಷ ಭರತ್, ನಗರ ಅಧ್ಯಕ್ಷ ಉಬೇದ್‌ಉಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ತೇಜಸ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ