ಮಂಡ್ಯ ನಗರದ ಶಿವನಂಜಪ್ಪ ಉದ್ಯಾನವನದ ದೇವರಕಾಡು ಕಟ್ಟೆಮನೆಯಲ್ಲಿ ಪರಿಚಯ ಪ್ರಕಾಶನ ಆಯೋಜಿಸಿದ್ದ ಚಲನಚಿತ್ರ ನಾಯಕ ದಿ.ಶಂಕರ್ನಾಗ್ ಜನ್ಮದಿನ ಪ್ರಯುಕ್ತ ಓದಿನ ಹಾದಿ-೫ನೇ ಸಂಚಿಕೆ ಅಭಿಯಾನದಲ್ಲಿ ಶಂಕರ್ನಾಗ್ ಸ್ಮರಣೆ ಹಾಗೂ ಅನಂತ್ನಾಗ್ ಬರೆದಿರುವ ನನ್ನ ತಮ್ಮ ಶಂಕರ್ ಮತ್ತು ಮಾಲ್ಗುಡಿ ಡೇಸ್ ಕೃತಿ ಓದುವ ಅಭಿಯಾನ ನಡೆಯಿತು.
ಮಾಲ್ಗುಡಿ ಡೇಸ್ ಕೃತಿ ಓದಿದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ಕುಮಾರ್ ಮಾತನಾಡಿ, ಕನ್ನಡನಾಡು ಇರುವ ತನಕ ಶಂಕರ್ನಾಗ್ ಪ್ರಸ್ತುತ, ರಂಗಭೂಮಿ ಮತ್ತು ಚಲನಚಿತ್ರ ರಂಗ ಎಲ್ಲಿತನ ಬೆಳೆಯುತ್ತದೆಯೋ ಅಲ್ಲಿತನಕ ಶಂಕರ್ನಾಗ್ ಜೀವಂತವಾಗಿರುತ್ತಾರೆ, ಆಟೋಚಾಲಕರು, ಅಭಿಮಾನಿಗಳು, ಕನ್ನಡಿಗರು ಸದಾ ಸ್ಮರಿಸಿಕೊಳ್ಳುವ ದೈತ್ಯ ಪ್ರತಿಭೆ ಶಂಕರ್ನಾಗ್ ಆಗಿದ್ದಾರೆ ಎಂದು ತಿಳಿಸಿದರು.

ದಿನೇ ದಿನೇ ಪುಸ್ತುಕಗಳ ಓದುವ ಹವ್ಯಾಸಿಗರು ಕಡಿಮೆಯಾಗುತ್ತಿದ್ದಾರೆ, ಮೊಬೈಲ್ ನೋಡುವವರು ಹೆಚ್ಚಾಗುತ್ತಿದ್ದಾರೆ. ಪರಿಚಯ ಪ್ರಕಾಶನ ತಂಡದವರು ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಓದಿನ ಹಾದಿ ಆರಂಭಿಸಿ ಪುಸ್ತಕ ಓದುವ ಗೀಳನ್ನು ಹೆಚ್ಚಿಸುವ ವಿಭಿನ್ನ ಅಭಿಯಾನ ಆರಂಭಿಸಿದೆ, ಓದುಗರು-ಕೇಳುಗರು ಒಂದೇ ಕಡೆ ಲಭ್ಯವಾಗುತ್ತಿದ್ದಾರೆ ಎಂದು ನುಡಿದರು.
ಪರ್ತಕರ್ತ ಆರ್.ಜೆ.ಹಳ್ಳಿ ಸಿದ್ದು, ಶಂಕರ್ನಾಗ್ ಅವರ ಕುರಿತು ಅನಂತ್ನಾಗ್ ಬರೆದಿರುವ “ನನ್ನ ತಮ್ಮ ಶಂಕರ್” ಕೃತಿ ಕೆಲವು ಪುಟಗಳನ್ನು ಓದಿ, ಜೀವನಚರಿತ್ರೆ ಮತ್ತು ಸಿನಿಮಾ ರಂಗ ಇರುವ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದರು.
ಇದೇ ಸಂಧರ್ಭದಲ್ಲಿ ಶಂಕರ್ನಾಗ್ ಅಭಿನಯ ಚಲನಚಿತ್ರ ಗೀತೆಗಳನ್ನು ಗಾಯಕರು ಹಾಡಿದರು, ಭಾವಚಿತ್ರಕ್ಕೆ ಪುಷ್ಪನಮನ-ದೀಪನಮನ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಚಯ ಪ್ರಕಾಶನ ಶಿವಕುಮಾರ್ ಆರಾಧ್ಯ ಮತ್ತು ತಂಡ ಹಾಗೂ ಹವ್ಯಾಸಿ ಓದುಗರು-ಕೇಳುಗರು ಹಾಜರಿದ್ದರು.




