Tuesday, November 24, 2026

ಪ್ರಾಯೋಗಿಕ ಆವೃತ್ತಿ

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನಾಂದೋಲನ : ಟಿ.ಎಲ್.ಕೃಷ್ಣೇಗೌಡ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಜನಾಂದೋಲನವು ನ.೧೫ರಿಂದ ಡಿ.೧೫ವರೆಗೆ ಮಂಡ್ಯ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಸಿಪಿಐ(ಎಂ) ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬೆಂಗಳೂರಿಗೆ ೫ನೇ ಹಂತದಲ್ಲಿ ಕಾವೇರಿ ನೀರು ಕೊಂಡೊಯ್ಯುವುದು ವಿರೋಧಿಸಿ, ೯.೫ ಸಕ್ಕರೆ ಇಳುವರಿಯ ಟನ್ ಕಬ್ಬಿಗೆ ೫೫೦೦ ಬೆಲೆ ನಿಗದಿ, ಉದ್ಯೋಗ ಖಾತರಿಯಡಿ ೨೦೦ ದಿನ ಕೆಲಸ, ದಿನಕ್ಕೆ ೬೦೦ ರೂ ಕನಿಷ್ಠ ಕೂಲಿ ಸೇರಿ ೨೧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಜನಾಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜನಾಂದೋನದ ಭಾಗವಾಗಿ ಜಿಲ್ಲೆಯ ಮನೆ ಮನೆಗಳಿಗೆ ತೆರಳಿ, ಸಿಪಿಐ(ಎಂ)ನ ಜನಪರ ಆಡಳಿತ, ಕೇರಳ ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡಿದ ಸಾಧನೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋದಿ ನೀತಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಅಂತೆಯೇ ಡಿ.೨೧ರಂದು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಎಲ್ಲಾ ೨೧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು. ಈ ಸಭೆಗೆ ಜಿಲ್ಲೆಯಿಂದ ೫೦೦೦ ಮಂದಿ ಭಾಗವಹಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಹನುಮೇಶ್, ಸುಶೀಲ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಎನ್.ಎಲ್.ಭರತ್‌ರಾಜ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ