Sunday, November 22, 2026

ಪ್ರಾಯೋಗಿಕ ಆವೃತ್ತಿ

ಭಾರತೀಯರ ಡಿ.ಎನ್.ಎ ನಲ್ಲಿಯೇ ಅನ್ವೇಷಣಾ ಮನೋಭಾವ ಇದೆ : ಡಾ.ಮೀರಾ ಶಿವಲಿಂಗಯ್ಯ

ಭಾರತೀಯರ ಡಿ.ಎನ್.ಎ ನಲ್ಲಿಯೇ ಅನ್ವೇಷಣಾ ಮನೋಭಾವನೆ ಅಡಕವಾಗಿದೆ ಎಂದು ಮಂಡ್ಯ ಜಿಲ್ಲಾ ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜು (ಸ್ವಯತ್ತ) ಹಾಗೂ ವಿಜ್ಞಾನ ವೇದಿಕೆ ಮತ್ತು ಆಂತರಿಕ ಗುಣಮಟ್ಟ ಕೋಶದ ವತಿಯಿಂದ (IQAC) ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ್ತ) ಆವರಣದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಾನಸಿಕವಾಗಿ ಸಧೃಡರಾಗಲು ಶಿಕ್ಷಣ ಅಗತ್ಯ, ವಿದ್ಯಾರ್ಥಿಗಳು ವಿಜ್ಞಾನದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ನಮ್ಮ ಪೂರ್ವಜರ ಕಾಲದಿಂದಲೂ ಭಾರತದಲ್ಲಿ ವಿಜ್ಞಾನ ಅನ್ವೇಷಣೆ ಇತ್ತು, ಬ್ರಿಟಿಷರು ಭಾರತಕ್ಕೆ ಕೇವಲ ಮಸಾಲ ಪದಾರ್ಥಗಳಿಗಾಗಿ ಮಾತ್ರ ಭಾರತಕ್ಕೆ ಬರಲಿಲ್ಲ, ನಮ್ಮ ಆಯುರ್ವೇದ ಸಂಸ್ಕೃತಿ ತಿಳಿದುಕೊಳ್ಳಲು ಸಹ ಬಂದಿದ್ದರು. ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿದ್ದು ನಮ್ಮ ಹೆಮ್ಮೆಯ ಭಾರತ ಎಂದು ಹೇಳಿದರು.

ಯುವ ಜನತೆ ಕೇವಲ ಮೊಬೈಲ್ ಮೂಲಕ ವಿಜ್ಞಾನ ಬಳಸುತ್ತಿದ್ದಾರೆ, ಮೊಬೈಲ್ ನಿಂದ ಆಚೆಗೂ ವಿಜ್ಞಾನ ಚಾದರ ಹಾಸಿಕೊಂಡಿದೆ, ಯುವ ಸಮೂಹ ವಿಜ್ಞಾನ ಕ್ಷೇತ್ರದಲ್ಲಿ ಮುಂದೆ ಬಂದು ನಮ್ಮ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಬೇಕು. ವಿಜ್ಞಾನ ಬೆಳೆದಂತೆ ಮನುಷ್ಯ ಆಧುನಿಕ ಉಪಕರಣಗಳ ಹಿಡಿತದಲ್ಲಿ ಸಿಲುಕಿದ್ದಾನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಹಿಡಿತ ಮನುಷ್ಯನ ನಿಯಂತ್ರಣದಲ್ಲಿ ಇರಬೇಕು ಎಂದು ಕಿವಿಮಾತು ಹೇಳಿದರು.

ಎ ಐ ತಂತ್ರಜ್ಞಾನ ಬಂದ ಮೇಲೆ ಮನುಷ್ಯ ತನ್ನ ಕಲ್ಪನಾ ಶಕ್ತಿ, ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ವಿಜ್ಞಾನದ ಆವಿಷ್ಕಾರ ನಿಮ್ಮಲ್ಲಿ ಜ್ಞಾನ ಜೊತೆಗೆ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ವಿಜ್ಞಾನ ಮಹತ್ವ ಅರಿಯಬೇಕು ಆವಿಷ್ಕಾರದ ಚಿಂತನೆಯನ್ನು ಮುಂದುವರಿಸಬೇಕು ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ಗುರುರಾಜ್ ಪ್ರಭು ಮಾತನಾಡಿ ವಿಜ್ಞಾನ ವಸ್ತುಪ್ರದರ್ಶನ 2025 ರಲ್ಲಿ ಕಂಪ್ಯೂಟರ್ ಸೈನ್ಸ್, ಕೆಮಿಸ್ಟ್ರಿ, ಬಯೋ ಕೆಮಿಸ್ಟ್ರಿ, ಬಾಟ್ನಿ, ಫಾರೆನ್ಸಿಕ್ ಸೈನ್ಸ್ ಸೇರಿದಂತೆ 10 ವಿಭಾಗದ ವಿಭಾಗಗಳು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನ 2025 ದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಸಮಾಜ ನಾವು ನೀಡುವ ಕೊಡುಗೆಯಿಂದ ಬೆಳೆಯುತ್ತದೆ. ದೊಡ್ಡ ದೊಡ್ಡ ಅನ್ವೇಷಣೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅನ್ವೇಷಣೆಗಳು ದೊಡ್ಡದೇ ಆಗಿರಬೇಕು ಎಂದು ಏನು ಇಲ್ಲ ಅನ್ವೇಷಣಾ ಮನೋಭಾವನೆ ನಮ್ಮಲ್ಲಿ ಇರಬೇಕು. ಬ್ಲೂಟೂತ್, ವೈಫೈ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಇದೆಲ್ಲವೂ ಅನ್ವೇಷಣೆಯಿಂದ ಸಾಧ್ಯವಾಯಿತು ಎಂದು ಹೇಳಿದರು.

ಮೀರಾ ಶಿವಲಿಂಗಯ್ಯ ಅವರು ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪು ಮುಡಿಸಿದ್ದಾರೆ. ಅವರಂತೆ ಎಲ್ಲಾ ಹೆಣ್ಣು ಮಕ್ಕಳು ಬೆಳೆಯಬೇಕು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಹೇಳಿದರು.

ನಂತರ ಜಿಲ್ಲಾ ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಗುರುರಾಜ್ ಪ್ರಭು ಅವರು ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನ-2025 ಇರಿಸಲಾಗಿದ್ದ ವಿವಿಧ ಬಗೆಯ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ವಸ್ತುಪ್ರದರ್ಶನ-2025 ರಲ್ಲಿ ಭಾಗವಹಿಸಿದ್ದ ಎಲ್ಲಾ ವಿಭಾಗದವರಿಗೂ ಪ್ರಮಾಣ ಪತ್ರ ನೀಡಿದರು.

ಇದೇ ಸಂದರ್ಭದಲ್ಲಿ ಪ್ರೊ.ಜಯಲಕ್ಷ್ಮಿ, ಮಹಿಳಾ ಸರ್ಕಾರಿ ಕಾಲೇಜಿನ ಜೋತಿ, ಪ್ರದೀಪ್ ಕುಮಾರ್, ರವಿ ಕಿರಣ್, ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ