Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನ.16 ಕ್ಕೆ ಕೃತಿಗಳ ಲೋಕಾರ್ಪಣೆ – ಆರೋಗ್ಯ ಸಂವಾದ

ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಹಾಗೂ ಎಂ.ಆರ್.ಎಂ ಪ್ರಕಾಶನ ಸಂಯುಕ್ಥಾಶ್ರಯದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಗೆ ಚಾಲನೆ, ಡಾ.ನೀಗೂ ರಮೇಶ್ ಅವರ 2 ಕೃತಿಗಳ ಲೋಕಾರ್ಪಣೆ ಹಾಗೂ ಆರೋಗ್ಯ ಸಂವಾದ ಕಾರ್ಯಕ್ರಮಗಳ ಸಹಜ ಆರೋಗ್ಯ ಸಮ್ಮಿಲನವನ್ನು ನ.16ರ ಬೆಳಿಗ್ಗೆ 10.30 ಮಂಡ್ಯನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕ ಚಂದ್ರಶೇಖರ್ ದ.ಕೋ.ಹಳ್ಳಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಹಾರ ಪದ್ದತಿ ಮತ್ತು ಜೀವನಶೈಲಿಯಿಂದ ಔಷಧವಿಲ್ಲದೆ ಆರೋಗ್ಯವಂತರಾಗಿ ಉಳಿಯುವ ಕುರಿತು ತಿಳುವಳಿಕೆ ನೀಡಲಾಗುವುದು ಎಂದರು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಫೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯಾಸಾನಿಧ್ಯದಲ್ಲಿ ಎಂ.ಆರ್.ಎಂ ಪ್ರಕಾಶನದ ಪ್ರಕಾಶಕ ಎಂ.ಆರ್.ಮಂಜು ಅಧ್ಯಕ್ಷತೆಯ ಕಾರ್ಯಕ್ರಮವನ್ನು ಖ್ಯಾತ ನ್ಯಾಚುರೋಪತಿ ತಜ್ಞ ವೈದ್ಯ ಡಾ.ಬಿ.ಆರ್.ಗಂಗಾಧರ ವರ್ಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುವರು.
ಸಹಜ ಕೃಷಿಕರು ಯೋಗ ಗುರುಗಳು ಆದ ಪಾಸಿಟಿವ್ ತಮ್ಮಯ್ಯ ಫೌಂಡೇಶನ್ ಗೆ ಚಾಲನೆ ನೀಡುವರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ. ಜಯಪ್ರಕಾಶ್ ಗೌಡ ಕೃತಿಗಳ ಲೋಕಾರ್ಪಣೆ ಮಾಡಲಿದ್ದು, ಆರೋಗ್ಯ ಹನಿ ಕೃತಿಯನ್ನು ಹಾಸನದ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡಗೌಡ, ಪ್ರಕೃತಿ ಚಿಕಿತ್ಸೆಯೊಂದಿಗೆ ಪರಿಪೂರ್ಣ ಆರೋಗ್ಯ ಕೃತಿಯನ್ನು ಪತ್ರಕರ್ತ, ಲೇಖಕ ಚಂದ್ರಶೇಖರ್ ದ.ಕೋ.ಹಳ್ಳಿ ಪರಿಚಯ ಮಾಡುವರು. ಕೃತಿಗಳ ಕರ್ತೃ ಡಾ.ನೀಗೂ ರಮೇಶ್, ವಿಶ್ರಾಂತ ಉಪನ್ಯಾಸಕ ಎನ್. ಮಹೇಶ್ ಕುಮಾರ್ ಉಪಸ್ಥಿತರಿರುವರು ಎಂದು ಹೇಳಿದರು.
ಮೈಶುಗರ್ ನ ಮುಖ್ಯ ಆಡಳಿತಾಧಿಕಾರಿ ವೈ.ಸಿ. ಮನುಜಶ್ರೀ ಅವರು, ಪ್ರಕೃತಿ ಚಿಕಿತ್ಸೆ ಹಿರಿಯ ಅನುಸಾರಕ ಎ.ಎಸ್.ಮಹೇಶ್ ಅವರಿಗೆ ನೀಡಿ ಗೌರವಿಸಲಾಗುವುದು.

ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಮುಖ್ಯಸ್ಥ ಕೆ.ಎಸ್.ಗಿರಿರಾಜು ಮತ್ತು ಸಹಜ ಕೃಷಿಕ ಪಾಸಿಟಿವ್ ತಮ್ಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಮುಖ್ಯಸ್ಥ ಕೆ.ಎಸ್.ಗಿರಿರಾಜು, ಎಂ.ಆರ್.ಎಂ ಪ್ರಕಾಶನದ ಪ್ರಕಾಶಕ ಎಂ.ಆರ್.ಮಂಜು, ಸಹಜ ಕೃಷಿಕ ವೈ.ಸಿ.ಯೋಗೇಶ್, ಉಮೇಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ