ಇತ್ತೀಚೆಗೆ ಸರ್ಕಾರ ರೈತ ಮುಖಂಡರ ಸಭೆ ಕರೆದು ತೀರ್ಮಾನ ಮಾಡಿರುವಂತೆ 2025-26 ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ ದರ ರೂ.50/- ಹಾಗೂ ಪ್ರೋತ್ಸಾಹ ಧನ ರೂ.50/-ಗಳನ್ನು ಸರ್ಕಾರದ ಈ ಆದೇಶದಂತೆ ಕಾರ್ಖಾನೆಯವರ ಸಭೆ ಕರೆದು ತಕ್ಷಣದಲ್ಲೇ ಹಣವನ್ನು ಕೊಡಿಸಿಕೊಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಕಬ್ಬು ಬೆಳೆಗಾರರಿಗೆ ಹೆಚ್ಚುವರಿದರ ಹಾಗೂ ಪ್ರೋತ್ಪಾದಧನ ಕೊಡಲು ತೀರ್ಮಾನಿಸಲಾಗಿದೆ. ಸರ್ಕಾರ ಘೋಷಿಸಿರುವ ಈ ಹೆಚ್ಚುವರಿ ಹಾಗೂ ಪ್ರೋತ್ಸಾಹಧನದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಅಲ್ಲದೇ ಉತ್ತರ ಕರ್ನಾಟಕದ ಭಾಗದ ಹಾಗೇಯೆ ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬನ್ನು ಜಮೀನಿನಲ್ಲೇ ಖರೀದಿ ಮಾಡುವ ಮೂಲಕ ಕಟಾವು ವೆಚ್ಚ ಹಾಗೂ ಸಾಗಾಣಿಕಾ ವೆಚ್ಚವನ್ನು ಕಾರ್ಖಾನೆಯವರೇ ಸಕ್ಕರೆ ಆಯುಕ್ತರ ನಿಯಮದ ಆದೇಶದಂತೆ ಭರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ ಶ್ರೀಕಂಠೇಗೌಡ. ಸಿಪಿಐಎಂ ಕುಮಾರಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಗತಿಪರ ಚಿಂತಕ ತುಳಸಿದರ್, ಕಬ್ಬು ಬೆಳೆಗಾರರ ಸಂಘದ ವೇಣುಗೋಪಾಲ್, ರೈತ ಸಂಘದ ಹೆಮ್ಮಿಗೆ ಚಂದ್ರಶೇಖರ್, ನಗರಸಭಾ ಮಾಜಿ ಅಧ್ಯಕ್ಷರಾದ ಕೆ.ಸಿ ನಾಗಮ್ಮ, ನಗರಸಭೆ ಮಾಜಿ ಸದಸ್ಯ ಪದ್ಮಾವತಿ, ರೈತಸಂಘದ ಅಣ್ಣಯ್ಯ, ಕನ್ನಡ ಸೇನೆ ಮಹಾಂತಪ್ಪ, ಚಿಕ್ಕಸ್ವಾಮಿ ಹಾಗೂ ಪುಟ್ಟಸ್ವಾಮಿಗೌಡ ಹಾಜರಿದ್ದರು.




