Friday, November 20, 2026

ಪ್ರಾಯೋಗಿಕ ಆವೃತ್ತಿ

ಭಕ್ತರ ಮನಸೆಳೆದ ಪಟ್ಟಲದಮ್ಮ ದೇವಿಯ ದುಡ್ಡಿನ ಅಲಂಕಾರ

ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ನಿತ್ಯ ದೇವತೆ ಪಟ್ಟಲದಮ್ಮ ದೇವಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದುಡ್ಡಿನ ಅಲಂಕಾರ ಮಾಡಲಾಗಿದ್ದು,ಭಕ್ತರ ಮನಸೆಳೆಯಿತು.

ದೇವರಿಗೆ 100,200,500,2000,50,20,10, ರೂಗಳ ಹೊಸ ನೋಟುಗಳನ್ನು ಬಳಸಿ ಅರ್ಚಕ ನಂದೀಶ್ ಒಟ್ಟು 2.10 ಲಕ್ಷ ರೂ.ಗಳನ್ನು ಬಳಸಿ ದೇವರು ಹಾಗೂ ಗರ್ಭಗುಡಿಗೆ ದುಡ್ಡಿನ ಅಲಂಕಾರ ಮಾಡಿದ್ದರು‌.

ನೋಟಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಗೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ