Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನ.23 ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕರ್ನಾಟಕ ಸಂಘದಿಂದ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.೨೩ರ ಬೆಳಿಗ್ಗೆ ೧೧ ಗಂಟೆಗೆ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್‍ಯದರ್ಶಿ ಪಿ.ಲೋಕೇಶ್ ಚಂದಗಾಲು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕರ್ನಾಟಕ ಸಂಘ ವತಿಯಿಂದ ೩೫ ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು. ಈ ಬಾರಿ ವಿವಿಧ ಪ್ರಾಯೋಜಕತ್ವದಲ್ಲಿ ೪೨ ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಎಸ್.ಬಿ.ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸಲಿದ್ದು, ರಾಜ್ಯೋತ್ಸವದ ಕುರಿತು ಮಾತನಾಡುವರು. ಜಿಲ್ಲಾ ಲಯನ್ಸ್‌ನ ಮಾಜಿ ರಾಜ್ಯಪಾಲ ಕೆ.ದೇವೇಗೌಡ, ಪರಿಸರ ಇಂಜಿನಿಯರಿಂಗ್ ಸಂಘದ ಅಧ್ಯಕ್ಷ ಡಾ.ಕೆ.ಸಿ.ಜಯರಾಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾ ಪ್ರೊ.ಕೆ.ಗುರುಜಯಪ್ರಭು ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡುವರು ಎಂದು ಹೇಳಿದರು.

ಸಮಾಜಸೇವಾ ಪ್ರಶಸ್ತಿಗೆ ಮಂಗಲ ಲಂಕೇಶ್, ಶಶಿಕಲಾ, ಎಂ.ಕೆ.ಮಂಜುನಾಥ್, ಸೇವಾ ಕೇತ್ರ ಪ್ರಶಸ್ತಿಗೆ ಮಹದೇವ, ಶಿಕ್ಷಣ ಕ್ಷೇತ್ರ ಪ್ರಶಸ್ತಿಗೆ ಕೆ.ಜವರೇಗೌಡ, ಚಲುವೇಗೌಡ, ಬಿ.ಆರ್.ಬೇಬಿ, ಟಿ.ರಾಮು, ಸಾಹಿತ್ಯ ಕ್ಷೇತ್ರ ಪ್ರಶಸ್ತಿಗೆ ಡಾ.ಸಿ.ಮಹದೇವ, ಪ್ರೊ.ನರಸಿಂಹೇಗೌಡ, ಸಾತನೂರು ದೇವರಾಜು, ಮುಹಮದ್ ಕಲೀಂಉಲ್ಲಾ, ದೋ.ಚಿ.ಗೌಡ, ಪತ್ರಿಕೋದ್ಯಮ ಕ್ಷೇತ್ರ ಪ್ರಶಸ್ತಿಗೆ ಮತ್ತೀಕೆರೆ ಜಯರಾಮ್, ಡಿ.ಎನ್.ಶ್ರೀಪಾದು, ಬಿ.ಜೆ.ಸೋಮಶೇಖರ್, ಕೆ.ವಿ.ಬಲರಾಮು, ರಂಗಭೂಮಿ ಕ್ಷೇತ್ರ ಪ್ರಶಸ್ತಿಗೆ ಜನಾರ್ಧನ ಕೊಂಡ್ಲಿ, ಪುಟ್ಟರಾಜು ಬೆಳತೂರು, ಜಯಮ್ಮ, ಮತ್ತುರಾಜು, ಎಚ್.ಎಸ್.ಮುಕ್ತ, ಜಾನಪದ ಕ್ಷೇತ್ರ ಪ್ರಶಸ್ತಿಗೆ ಬಿ.ವೆಂಕಟೇಶ್ ಉಮಾಶಂಕರ್, ಹೊನ್ನಯ್ಯ, ಪುಟ್ಟಸ್ವಾಮಿ, ಕೆ.ಜಿ.ರಮೇಶ್, ಸುಂದರೇಶ್, ಸಂಗೀತ ಕ್ಷೇತ್ರ ಪ್ರಶಸ್ತಿಗೆ ಸಿ.ಪಿ.ವಿದ್ಯಾಶಂಕರ್, ಎ.ವಿ.ಗೋವಿಂದರಾಜು, ಭಾರತಿ ಶಿವರಾಮಶಾಸ್ತ್ರಿ, ಎಚ್.ಕೆ.ಚಂದ್ರಹಾಸ, ಪ.ಮ.ನಂಜುಂಡಸ್ವಾಮಿ, ಎಂ.ಕೆ.ನಿಶ್ಚಯ್ ಜೈನ್, ಕೃಷಿ ಕ್ಷೇತ್ರದ ಪ್ರಶಸ್ತಿಗೆ ಎಸ್.ಜಗದೀಶ್, ಎಂ.ಮಂಜು, ಕ್ರೀಡಾ ಕ್ಷೇತ್ರ ಪ್ರಶಸ್ತಿಗೆ ಎಂ.ಸಂತೋಷ್‌ಕುಮಾರ್, ಆರ್.ಎಸ್.ಪವನ್‌ಕುಮಾರ್, ಜಿ.ಪಿ.ಅರ್ಚನ, ಪಿ.ಆರ್.ಕಾಮಾಕ್ಷಿ ಹಾಗೂ ಸಂಘಟನಾ ಕ್ಷೇತ್ರ ಪ್ರಶಸ್ತಿಗೆ ಎಚ್.ಸಿ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಶಸ್ತಿ ಪುರಸ್ಕೃತರಿಗೆ ತಲಾ ೧೫ ಸಾವಿರ ರೂ ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ, ಕಾರ್‍ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಎಚ್.ಡಿ.ಸೋಮಶೇಕರ್, ನಿರ್ದೇಶಕರಾದ ಎಚ್.ಬಿ.ನಾಗಪ್ಪ, ನಾಗರೇವಕ್ಕ, ಸದಸ್ಯ ಕೆ.ಜಯರಾಮು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ