Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವಿದ್ಯುತ್ ಉಪಕೇಂದ್ರ ಸ್ಥಳಾಂತರಿಸಲು ಒತ್ತಾಯ

ಮಂಡ್ಯ ತಾಲೂಕಿನ ಬೇಲೂರು ಗ್ರಾ.ಪಂ ವ್ಯಾಪ್ತಿಯ ದ್ವಾರಕನಗರದಲ್ಲಿ ಸೆಸ್ಕ್ ವತಿಯಿಂದ ಸ್ಥಾಪಿಸಲು ಮುಂದಾಗಿರುವ ೬೬/೧೧ ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ನಗರ ಭಾಗದಿಂದ ಹೊರಕ್ಕೆ ಸ್ಥಳಾಂತರಿಸಬೇಕು ಎಂದು ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು ಒತ್ತಾಯಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಾರಕನಗರದಲ್ಲಿ ಹಾದು ಹೋಗಿರುವ ೬೬ ಕೆವಿ ವಿದ್ಯುತ್ ಮಾರ್ಗದ ಕೆಳಭಾಗದ ಸ್ಥಳವು ಬಡಾವಣೆಯ ಉದ್ಯಾನಕ್ಕಾಗಿ ಮೀಸಲಿಡಲಾಗಿದೆ. ಇಲ್ಲಿ ಬಡಾವಣೆಯ ಮಕ್ಕಳ ಆಟೋಟ ಚಟುವಟಿಕೆಗಳಿಗೆ, ಬಡಾವಣೆಯ ಜನರ ಸಮುದಾಯ ಕಾರ್‍ಯಕ್ರಮಗಳಿಗೆ ಸದ್ಬಳಕೆಯಾಗಲಿದೆ ಎಂದರು.

ಈ ಸ್ಥಳವೂ ಸಿಎ ನಿವೇಶನ ಅಥವಾ ಬೇರಾವುದೇ ಮೈದಾನ ಆಗಿರುವುದಿಲ್ಲ. ಬಡಾವಣೆ ರಚನೆಯ ವಿನ್ಯಾಸ ನಕ್ಷೆಯಲ್ಲೂ ಉದ್ಯಾನ ಎಂದೇ ಗುರುತಿಸಲಾಗಿದೆ. ಇಲ್ಲಿ ಅಪಾಯಕಾರಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವುದು ಸೂಕ್ತವಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ, ಜಿ.ಪಂ ಸಿಇಓ, ಇಓ, ಪಿಡಿಓಗಳಿಗೆ ಮನವಿ ನೀಡಲಾಗಿದೆ. ಈ ಸಂಬಂಧ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಬಡಾವಣೆಯಿಂದಾಚೆಗೆ ಬಯಲು ಪ್ರದೇಶವಿದ್ದು, ಅಲ್ಲಿ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಸೆಸ್ಕ್ ಅಧ್ಯಕ್ಷರೂ ಆದ ಶ್ರೀರಂಗಪಟ್ಟಣ ಶಾಸಕರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ದಾಸಯ್ಯ, ಚಂದ್ರೇಗೌಡ, ಸದಸ್ಯೆ ಕರುಣ, ಎಚ್.ಆರ್.ಅಶೋಕ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ