ಒಂದೇ ತರವಾದ ಬೆಳೆ ಬೆಳೆಯುವ ಬದಲು ಏಕ ದಳ. ದ್ವಿದಳ ಬೆಳೆ ಬೆಳೆಯುವುದು ಸೂಕ್ತ ಇದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ಪೂರೈಕೆ ಮಾಡಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಪಿ. ಎಲ್. ಪಾಟೀಲ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಜಲಾನಯನ ಅಭಿವೃದ್ಧಿ ಇಲಾಖೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ “ಸಮಗ್ರ ಕೃಷಿಯಿಂದ ಸುಸ್ಥಿರತೆ” ಎಂಬ ಶಿರ್ಷಿಕೆ ಅಡಿಯಲ್ಲಿ ಮೂರು ದಿನಕಾಲ ಮಂಡ್ಯದ ವಿ. ಸಿ. ಫಾರಂ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ವಿಶ್ವವಿದ್ಯಾಲಯದ ಮೊದಲ ಕೃಷಿ ಮೇಳ ಶೀರ್ಷಿಕೆ ಸಮಗ್ರ ಕೃಷಿಯಿಂದ ಸುಸ್ಥಿರತೆಯಾಗಿದೆ . ರೈತ ಬಾಂಧವರು ಸುಸ್ಥಿರ ಕೃಷಿಗೆ ಮುಂದಾಗಬೇಕು ನಿಸರ್ಗದತ್ತವಾಗಿ ದೊರೆಯುವ ಮಣ್ಣು ಮತ್ತು ನೀರಿನ ಸಂಸ್ಕರಣೆ ಮಾಡುವುದು ಮುಖ್ಯ. ಮಂಡ್ಯ ಜಿಲ್ಲೆ ಶೇ. 70ಕ್ಕೂ ಹೆಚ್ಚು ಭೂಮಿ ಹಸಿರುಮಾಯವಾಗಿದೆ ಇದಕ್ಕೆ ಕಾವೇರಿ ಮಾತೆಗೆ ನೀವು ಚಿರಋಣಿಯಾಗಿರಬೇಕು ಎಂದು ಹೇಳಿದರು.
ಭೂಮಿಗೆ ಹರಿದು ಬರುವ ನೀರಿನ್ನು ಸಂಸ್ಕರಣ ಮಾಡಿ ಮಿತವಾಗಿ ಬಳಕೆ ಮಾಡಿ. ಭೂಮಿಯ ಸವಕಳಿಯನ್ನು ತಪ್ಪಿಸಿ. ಸಾವಯವ ಕೃಷಿ ಪದ್ಧತಿಯ ಮೂಲಕ ಉತ್ತಮ ಭತ್ತದ ಇಳುವರಿಯನ್ನು ಪಡೆಯಬಹುದು. ಕಬ್ಬಿನ ಬೆಳೆಗೆ ಸಾಲು ಸಾಲು ಬಿಟ್ಟು ನೀರು ಹಾಯಿಸಿ. ತೋಟಗಾರಿಕೆ ಬೆಳೆ ಜೊತೆ ಕುರಿ. ಕೋಳಿ ಸಾಕಾಣಿಕೆ ಜೊತೆಗೆ ಪಶುಪಾಲನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಆರ್. ನೆಹಲ್ ಅವರು ಮಾತನಾಡಿ ಸದರಿ ಕೃಷಿ ಮೇಳದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಮಳಿಗೆಯನ್ನು ತೆರೆದಿದ್ದಾರೆ. ನಮ್ಮ ರೈತ ಮಹಿಳೆಯರನ್ನು ಸುಸ್ಥಿರರನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಯ ಮೂಲಕ ಹಲವು ಸೌಲಭ್ಯವನ್ನು ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಕುಕ್ಕುಟ ಸಂಜೀವಿನಿ. ಮತ್ಸ್ಯ ಸಂಜೀವಿನಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು
ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಇದೇ ಮೊದಲ ಬಾರಿಗೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾಗಿಯಾಗಿ ರೈತರು ಕೃಷಿ ಕುರಿತಾಗಿ ಮಾಹಿತಿ ಪಡೆಯಬೇಕು. ಭಾರತ ದೇಶದಲ್ಲಿ ಕೃಷಿ ಭೂಮಿ ಸವಿಸ್ತರವಾಗಿದೆ. ರೈತರು ಹಳೆಯ ಹಾಗೂ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಬಿಟ್ಟು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಲಾಭವನ್ನು ಪಡೆಯಬಹುದು. ನೀರು ಮತ್ತು ಮಣ್ಣಿನ ಪೋಷಣೆ ಮಾಡುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ. ಎಂದು ಆಶೀರ್ವಾಚನ ನೀಡಿದರು.
ಸರ್ಕಾರದ ಕೆಲಸ ಉತ್ತಮವಾದದ್ದು
ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿಗಳು ಮಾತನಾಡಿ ಕೃಷಿಕರೇ ಹೆಚ್ಚಾಗಿರುವ ಸಂಶೋಧನ ಕೇಂದ್ರಕ್ಕೆ ವಿಶ್ವ ವಿದ್ಯಾಲಯ ನೀಡಿ 5 ಜಿಲ್ಲೆಗೆ ಅನುಕೂಲ ಮಾಡಿಕೊಟ್ಟಿರುವ ಸರ್ಕಾರದ ಕೆಲಸ ಉತ್ತಮವಾದದ್ದು. ಮಂಡ್ಯ ಜಿಲ್ಲೆಯ ರೈತರು ಕೃಷಿಯಲ್ಲಿ ತೊಡಗಿದ್ದರು ಸಹ ಇಳುವರಿ ಕಡಿಮೆ ಆದ್ದರಿಂದ ಪ್ರಗತಿಪರ ರೈತರ ಸಂಖ್ಯೆ ಹೆಚ್ಚಾಗಲು ವಿಶ್ವವಿದ್ಯಾಲಯ ತೆರೆದುಕೊಂಡು ಕೃಷಿ ಸಂಶೋಧಕರು ರೈತರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಗೆ ತಂತ್ರಜ್ಞಾನದ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಕುವೆಂಪುರವರ ನೇಗಿಲ ಯೋಗಿ ಹಾಡಿನಂತೆ ಭೂಮಿ ಮತ್ತು ನೀರನ್ನು ಮಾತೆಯಂತೆ ಪೂಜಿಸಬೇಕು. ಕೃಷಿ ಕ್ಷೇತ್ರಕ್ಕೆ ಯುವ ಸಮೂಹ ಹೆಚ್ಚಿನ ಆದ್ಯತೆ ನೀಡಿ ಆಧುನಿಕ ಯಂತ್ರೋಪಕರಣಗಳು ತಂತ್ರಜ್ಞಾನ ಬಳಸಿ ಕೃಷಿ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಕೃಷಿ ಕುರಿತು ಮಾಹಿತಿಯುಳ್ಳ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿ. ರೈತ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ ಹರಿಣಿ ಕುಮಾರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ನಿರ್ದೇಶಕ ನೇಹಲ್ ಆರ್.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ, ಉದ್ಯಮಿ. ಕನ್ನಡ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ. ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ. ಪಿ. ಎಲ್ ಪಾಟೀಲ. ಸಂಶೋಧನ ನಿರ್ದೇಶಕ ಡಾ. ಜಿ. ಎಂ. ದೇವಗಿರಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




