ನಾನು ಶಾಸಕನಾದ ಮೇಲೆ ಹೊಸ ನ್ಯಾಯಾಲಯ ಸಂಕಿರ್ಣ ಕಟ್ಟಬೇಕೆಂದು ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಅವರು ಪ್ರಸ್ತಾಪಿಸಿದರು. ಹಲವು ಕಡೆ ಜಾಗಗಳನ್ನು ಪರಿಶೀಲನೆ ನಡೆಸಲಾಯಿತು. ಅಂತಿಮವಾಗಿ ಮಂಡ್ಯ ನ್ಯಾಯಾಲಯ ಹಿಂಭಾಗವೇ 22 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಅಲ್ಲಿಯೇ ಇನ್ನು ಕೆಲವೇ ದಿನಗಳಲ್ಲಿ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗುವುದು, ಇದಕ್ಕೆ ವಕೀಲರ ಸಂಘದ ಎಲ್ಲ ಸದಸ್ಯರ ಸಹಕಾರ ಅಗತ್ಯವೆಂದು ಮಂಡ್ಯ ಶಾಸಕ ರವಿಕುಮಾರ್ ಗೌಡ ತಿಳಿಸಿದರು.
ವಕೀಲರ ಸಂಘ (ರಿ) ಮಂಡ್ಯ, ಹೆಚ್. ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ಸ್ ರಿಕ್ರಿಯೇಷನ್ ಕ್ಲಬ್, ವಕೀಲರ ವಿವಿದೋದ್ದೇಶ ಸಹಕಾರ ಸಂಘ, ವಕೀಲರ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ, ವಕೀಲರ ದಿನಾಚರಣೆ ಹಾಗೂ ವಕೀಲರ ದಿನಚರಿ ಬಿಡುಗಡೆ ಸಮಾರಂಭದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ ಆಗಿದೆ. ಹೊಸ ನೀರು ಬಂದಾಗ ಅದರ ಅರಿವು ಬಹಳ ವೇಳವಾಗಿರುತ್ತೆ, ಹಾಗೇ ವಕೀಲರ ಸಂಘಕ್ಕೆ ಹೊಸ ತಂಡ ಬಂದ ನಂತರ ಸಂಘಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಹೀಗೆಯೇ ಅವರ ಅಧಿಕಾರಾವಧಿಯವರೆಗೆ ಕಾರ್ಯ ಮುಂದುವರಿಯಲಿ ಎಂದರು.
ಕಾವೇರಿ ನೀರಿನ ಹೋರಾಟದಲ್ಲಿ ಮಂಡ್ಯ ಯಾವತ್ತು ಮುಂದೆ ಇರುತ್ತೆ. ಹಾಗಾಗಿ ಮಂಡ್ಯ ದೇಶದಲ್ಲಿ ಹೆಸರಾಗಿದೆ, ಸ್ವಾತಂತ್ರ ಪೂರ್ವದಲ್ಲಿಯೇ ಮಂಡ್ಯದಲ್ಲಿ ಮದ್ಯ ತಯಾರಿಕೆ ಮಾಡಿ 140ಕ್ಕೂ ಹೆಚ್ಚು ದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು, ಅಂದಿನಿಂದಲೇ ಮಂಡ್ಯವೆಂದರೆ ಇಂಡಿಯಾ ಎಂಬ ಮಾತು ಚಾಲ್ತಿಗೆ ಬಂದು ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಸ್ತ್ರಮಠ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಾನು ಮಂಡ್ಯ ಜಿಲ್ಲೆಗೆ ಬಂದೆ, ಆ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು, ಜಿಲ್ಲಾ ನ್ಯಾಯಾಲಯವನ್ನು ಸುಣ್ಣ ಬಣ್ಣ ಮಾಡಿಸಲು ಶ್ರಮಿಸಿದೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಸ್ತ್ರಮಠ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




