Friday, May 17, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಹೆಚ್.ಡಿ.ಕುಮಾರಸ್ವಾಮಿ ಪರ ನಿಖಿಲ್ ರೋಡ್ ಶೋ

ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಣವಂತರು ಹಾಗೂ ಹೃದಯವಂತರ ನಡುವೆ ಹೋರಾಟ ನಡೆಯುತ್ತಿದೆ. ಪ್ರಜ್ಞಾವಂತ ಮತದಾರ ಬಂಧುಗಳು ಎರಡೂ ಕ್ಷೇತ್ರದಲ್ಲಿ ಹೃದಯವಂತರನ್ನು ಗೆಲ್ಲಿಸಿ ಹಣವಂತರನ್ನು ಮನೆಗೆ ಕಳಿಸಲಿದ್ದಾರೆ. ನ್ಯಾಯ ಅನ್ಯಾಯದ ಯುದ್ಧದಲ್ಲಿ ನ್ಯಾಯವು ಗೆಲ್ಲಲಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು .

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ, ಸೋಮನಹಳ್ಳಿ, ಆಲಂಬಾಡಿಕಾವಲ್, ಅಕ್ಕಿಹೆಬ್ಬಾಳು, ಬೀರವಳ್ಳಿ, ಮಂದಗೆರೆ, ಮಾದಾಪುರ, ಆನೆಗೋಳ, ಐಚನಹಳ್ಳಿ, ಕಿಕ್ಕೇರಿ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್. ಡಿ.ಕುಮಾರಸ್ವಾಮಿ ಅವರ ಪರವಾಗಿ ರೋಡ್ ಶೋ ಮಾಡಿ ಬಿರುಸಿನ ಮತ ಪ್ರಚಾರ ನಡೆಸಿದರು.

ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನ್ಯಾಯ ಅನ್ಯಾಯದ ನಡುವೆ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಹೃದಯವಂತರಿಗೆ ಗೆಲುವಾಗಲಿದ್ದು ನಾಡಿನ ಅನ್ನದಾತರಾದ ರೈತರು ಹಾಗೂ ಅಭಿವೃದ್ಧಿಯ ಪರವಾಗಿ ಕೆಲಸಮಾಡಲು ಸಂಕಲ್ಪ ಮಾಡಿರುವ ಡಾ.ಮಂಜುನಾಥ್ ಮತ್ತು ಕುಮಾರಣ್ಣ ಅವರನ್ನು ಪ್ರಜ್ಞಾವಂತ ಮತದಾರ ಬಂಧುಗಳು ಹರಸಿ ಆಶೀರ್ವದಿಸುವ ಮೂಲಕ ಭರ್ಜರಿ ಗೆಲುವನ್ನು ತಂದು ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಹೆಚ್.ಟಿ.ಮಂಜು ಹಾಗೂ ಮಾಜಿ ಸಚಿವರಾದ ನಾರಾಯಣಗೌಡ ಜೋಡಿ ಹೋರಿಗಳಂತೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ಒಂದಾಗಿ ದುಡಿಯುವ ಶಪಥ ಮಾಡಿರುವುದು ಸಂತೋಷ ತಂದಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿರುವ ನಾರಾಯಣಗೌಡ ಸಜ್ಜನ ರಾಜಕಾರಣಿಗಳಾಗಿದ್ದು 1800ಕೋಟಿ ರೂಪಾಯಿ ಗಳಿಗೂ ಹೆಚ್ಚಿನ ಅನುಧಾನ ತಂದು ಕೃಷ್ಣರಾಜಪೇಟೆ ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲೂಕನ್ನಾಗಿ ಅಭಿವೃದ್ಧಿ ಮಾಡಿ ತಮ್ಮ ಸಾಮಥ್ಯವನ್ನು ಸಾಭಿತು ಮಾಡಿದ್ದಾರೆ ಎಂದರು.

ಮಾಜಿ ಸಚಿವ ಡಾ.ನಾರಾಯಣಗೌಡ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿಜಿ ಅವರ ಪರವಾದ ಅಲೆಯು ಜೋರಾಗಿ ಬೀಸುತ್ತಿದ್ದು ಮತ್ತೊಮ್ಮೆ ಈದೇಶದ ಪ್ರಧಾನಿಯಾಗಿ ಮೋಧೀಜಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಕೆ.ಆರ್.ಪೇಟೆ ತಾಲೂಕಿನ ಎರಡೂ ಪಕ್ಷಗಳ ಕಾರ್ಯಕರ್ತರು ಒಪ್ಪಿಕೊಂಡು ಒಂದಾಗಿ ಪ್ರಚಾರ ನಡೆಸುತ್ತಾ ಕೆಲಸ ಮಾಡುತ್ತಿದ್ದಾರೆ. ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಮಾರಣ್ಣ ಕಾಂಗ್ರೆಸ್ ಅಭ್ಯರ್ಥಿಗಿಂತ ಅತೀ ಹೆಚ್ಚಿನ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಾರಂಗಿ ನಾಗಣ್ಣ, ಮನಮುಲ್ ನಿರ್ದೇಶಕ ಡಾಲು ರವಿ, ಮುಖಂಡರಾದ ರಾಜೇನಹಳ್ಳಿ ಕುಮಾರಸ್ವಾಮಿ, ಕುರುಬಳ್ಳಿ ನಾಗೇಶ್, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಕೆ.ಶ್ರೀನಿವಾಸ್, ಬಿ. ಜವರಾಯಿಗೌಡ, ಹೆಳವೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!