Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸಿಂಥೆಟಿಕ್ ಅಂಕಣದ ಬ್ಯಾಡ್ಮಿಂಟನ್ ಕ್ರೀಡಾಂಗಣ ಲೋಕಾರ್ಪಣೆ

ಮಂಡ್ಯ ನಗರದ ಪ್ರತಿಷ್ಠಿತ ಪಿಇಟಿ ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸಿಂಥೆಟಿಕ್ ಬ್ಯಾಡ್ಮಿಂಟನ್ ಅಂಕಣವನ್ನು ಇಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಉದ್ಘಾಟಿಸಿದರು.

ಆಟಗಾರರ ಹಿತದೃಷ್ಟಿಯಿಂದ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಅತ್ಯಾಧುನಿಕ ಯೋನೆಕ್ಸ್ ಕಂಪನಿಯ ತಲಾ ಆರು ಲಕ್ಷ ಮೌಲ್ಯದ ಸಿಂಥೆಟಿಕ್ ಮ್ಯಾಟ್ ಹಾಕಲಾಗಿದೆ.ಈ ಮೊದಲು ನಾಲ್ಕು ಅಂಕಣವಿತ್ತು.ಈಗ ಆರು ಅಂಕಣಗಳನ್ನು ನಿರ್ಮಿಸಲಾಗಿದೆ.

ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯೊಂದಿಗೆ 6 ವುಡನ್ ಸಿಂಥೆಟಿಕ್ ಬ್ಯಾಡ್ಮಿಂಟನ್ ಅಂಕಣಗಳನ್ನು ಉನ್ನತ ದರ್ಜೆಗೆ ನವೀಕರಿಸಲಾಗಿದೆ ಎಂದರು. ಕ್ರೀಡಾಂಗಣಕ್ಕೆ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್ 2022-25ರ ಅಧಿಕೃತ ಫ್ಲೋರಿಂಗ್ ಪೂರೈಕೆದಾರ ಯೋನೆಕ್ಸ್ ರವರ ಮ್ಯಾಟ್ ಅಳವಡಿಸಲಾಗಿದೆ. ಇದು15 ರಿಂದ 20 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ತಿಳಿಸಿದರು.

ನಿರ್ದಿಷ್ಟವಾಗಿ ಒಳಾಂಗಣ ಕ್ರೀಡಾಂಗಣಕ್ಕಾಗಿಯೇ ಅಭಿವೃದ್ಧಿಪಡಿಸಿರುವ ಹಾಗೂ ಕಣ್ಣಿಗೆ ತಂಪಾಗಿರುವ 150 ವ್ಯಾಟ್ ಸಾಮರ್ಥ್ಯದ 48ಪ್ಯಾನೆಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಸರಾಸರಿ 400 ಎಲ್‌ಯುಎಕ್ಸ್ ಬೆಳಕಿನ ಸಾಂದ್ರತೆಯನ್ನು ನಿರ್ವಹಿಸುವ ಬೆಳಕಿನ ತಂತ್ರಜ್ಞಾನವನ್ನು ಜೋಡಿಸಿರುವುದಾಗಿ ಹೇಳಿದರು.

ಇಂತಹ ಆಧುನಿಕ ಸೌಲಭ್ಯವನ್ನು ಹೊಂದಿದ ಜಿಲ್ಲೆಯ ಪ್ರಪ್ರಥಮ ಒಳಾಂಗಣ ಕ್ರೀಡಾಂಗಣವೆಂಬ ಹಿರಿಮೆಗೆ ಪಿಇಟಿ ಬ್ಯಾಡ್ಮಿಂಟನ್ ಅಂಕಣ ಪಾತ್ರವಾಗಿದೆ. ತಮ್ಮ ಆಸಕ್ತಿ ಫಲವಾಗಿ ಬಹಳ ವರ್ಷಗಳ ಕನಸು ಈಗ ಈಡೇರಿದಂತಾಗಿದೆ. ಈ ಸೌಲಭ್ಯವನ್ನು ಬ್ಯಾಡ್ಮಿಂಟನ್ ಕ್ರೀಡಾಂಗಣದ ಸದಸ್ಯರು, ಕ್ರೀಡಾಸಕ್ತರು, ಯುವ ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲಿ ಎಂದು ಆಶಿಸಿದರು.

ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗ ಯ್ಯ, ಸಂಸ್ಥೆಯ ಎಲ್ಲಾ ಟ್ರಸ್ಟಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ