ಮಂಡ್ಯ ನಗರದ ಆರ್ ಟಿ ಒ ಕಛೇರಿ ಎದುರಿನ ಕಾಳಪ್ಪ ಬಡಾವಣೆ ಜಾಗದಲ್ಲಿದ್ದ ಶೌಚಾಲಯಗಳನ್ನು ಕೆಡವಿ ಜಾಗ ಒತ್ತುವರಿ ಮಾಡಿರುವ ವಿರುದ್ದ, ಇಂದು ಬಡಾವಣೆಯ ನಿವಾಸಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
ಕಾಳಪ್ಪ ಬಡಾವಣೆಯ ನಿವಾಸಿಗಳು ಸುಮಾರು 50 ವರ್ಷಗಳಿಂದ ವಾಸವಿದ್ದಾರೆ. ಸುಮಾರು 80 ಕುಟ್ಟುಂಬಗಳು ಸದ್ಯಕ್ಕೆ ವಾಸವಾಗಿದ್ದಾರೆ. ಎಲ್ಲರಿಗೂ ಸೇರಿ ಶೌಚಾಲಯ ಇದ್ದಂತಹ ಜಾಗವನ್ನು, ಅನ್ಯರು ಬಂದು ತಮ್ಮದೆಂದು ಕೆಡವಿರೊದು ಎಷ್ಟು ಸರಿ ಎಂದು ಕರ್ನಾಟಕ ಜನಶಕ್ತಿಯ ಕಾರ್ಯದರ್ಶಿ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.
2007 ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಸ್ಲಂ ಜಾಗವೆಂದು ಘೋಷಣೆ ಮಾಡಲಾಗಿತ್ತು.
ಆದರೆ ಇಂದು ಯಾವುದೊ ಗ್ರಾಮ ಸಹಾಯಕ ಸಂಘದ ಕೆಲವರು ಯಾವುದೇ ಆಧಾರ ಇಲ್ಲದೆ ನೇರಾನೇರ ಕೆಡವಿದ್ದಾರೆ. ಇದು ಅತ್ಯಂತ ಅಕ್ರಮ ಎಂದು ಸ್ಥಳೀಯ ಶ್ರಮಿಕರು ಜಿಲ್ಲಾಡಳಿತವನ್ನು ವಿರೋಧಿಸಿದರು.
ಸದ್ಯ ಎಲ್ಲರೂ ನಮ್ಮ ಒಂದಿಂಚ್ಚು ಜಾಗವನ್ನು ನಾವು ಬಿಟ್ಟುಕೊಡಲು ತಯಾರಿ ಇಲ್ಲ ಎಂದು ಪಟ್ಟುಹಿಡಿದ್ದಾರೆ.
ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟು ಸಮಸ್ಯೆಯನ್ನು ಬಗೆಹರಿಸುವ ವರೆಗೂ ಅನಿರ್ಧಿಷ್ಟಾವದಿ ಹೋರಾಟ ನಡೆಯುತ್ತದೆ ಎಂದು ತಿಳಿಸಿದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ಪ್ರಕಾಶ್, ಕೃಷ್ಣ ಪ್ರಕಾಶ್, ಆರುಮುಗಂ , ತುಳಸಮ್ಮ, ಮುತ್ತಮ್ಮ, ಶೈಲಜಾ, ಸುಬ್ರಮಣ್ಯ, ಜ್ಯೋತಿ, ಅಂಜಲಿ, ನೆಲದನಿ ಬಳಗದ ಲಂಕೇಶ್, ವೈರಮುಡಿ ಇತರರು ಇದ್ದರು.