Thursday, November 19, 2026

ಪ್ರಾಯೋಗಿಕ ಆವೃತ್ತಿ

ಇಂದಿಗೆ ಒಂದು ವರ್ಷ…

ಶಿವಸುಂದರ್

ಇಂದಿಗೆ ಒಂದು ವರ್ಷ…

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ….

ಅಲ್ಪಸಂಖ್ಯಾತ ಕೋಸಂಬರಿ ಮತ್ತು ಮಜ್ಜಿಗೆಹುಳಿಗಳ ಬ್ರಾಹ್ಮಣಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಪ್ರಶ್ನಿಸಿ…

ಬಾಡು-ಕೊರಬಾಡುಗಳ ಬಹುಸಂಖ್ಯಾತ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯ ಹಕ್ಕನ್ನು ಪ್ರತಿಪಾದಿಸಿದ….

ಮಂಡ್ಯದ ಬಾಡೂಟ ಬಳಗದ ಯಶಸ್ವಿ ಜನವಾದಿ ಸಾಂಸ್ಕೃತಿಕ ಸಂಘರ್ಷಕ್ಕೆ ಒಂದು ವರ್ಷ…

ಇಂದಿಗೆ ಒಂದು ವರ್ಷ…

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೇ ಅತ್ಯಂತ ಅರ್ಥಪೂರ್ಣ
ಗೋಷ್ಠಿಯನ್ನು ಸಂಘಟಿಸಿದ ಮಂಡ್ಯದ ಬಾಡೂಟ ಬಳಗಕ್ಕೆ
ಹೃತ್ಪೂರ್ವಕ ಅಭಿನಂದನೆಗಳು…

ಕನ್ನಡದ ಬಾವುಟ- ಕನ್ನಡದ ಬಾಳೆಲೆ

ಕನ್ನಡದ ಬಾಳೆಲೆಯಲ್ಲಿ
ಬಾಡಿನ ಜೊತೆಗೆ ಕೊರಬಾಡುಗಳು
ಹೆಚ್ಚಾಗಲಿ…

ಕನ್ನಡದ ಬಾವುಟದಲ್ಲಿ
ಕೆಂಪು ಹಳದಿಯೊಂದಿಗೆ
ಹಸಿರು, ನೀಲಿಗಳೂ ಸೇರಲಿ..

ಬಾಯಲ್ಲಿಡುವ ಮುನ್ನ
ಅನ್ನವಿಲ್ಲದವರ ನೆನೆದು
ಅಳುಕಾಗಲಿ…

ಅನ್ನದಲ್ಲಿ
ಭಿನ್ನವೆಣಿಸದಂತಾಗಲಿ

ಬಡಿಸುವಾಗ ಇಲ್ಲದವರಿಗೆ
ಮೊದಲ ಪಾಲಿರಲಿ..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ