Tuesday, November 24, 2026

ಪ್ರಾಯೋಗಿಕ ಆವೃತ್ತಿ

ಭಾರತೀನಗರ : ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವಿಶೇಷಪೂಜೆ

ಮದ್ದೂರು ತಾಲ್ಲೂಕಿನ ಭಾರತೀ ನಗರದಲ್ಲಿರುವ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ವೈಕುಂಠದ ದ್ವಾರ ಪ್ರವೇಶ ಧಾರ್ಮಿಕ ಕಾರ್ಯವನ್ನು ಡಿ.30ರ ಮಂಗಳವಾರದಂದು ಆಯೋಜಿಸಲಾಗುತ್ತದೆ ಎಂದು ದೇವಾಲಯದ ಟ್ರಸ್ಟಿ ವೆಂಕಟೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ದೇವಾಲಯ ನಿರ್ಮಾಣಗೊಂಡು 4 ವರ್ಷಗಳು ಸವಿನೆನಪಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿ.30 ರ ಮಂಗಳವಾರದಂದು ಬೆಳಗ್ಗೆ 4.30 ರಿಂದ ರಾತ್ರಿ 10 ರವರೆಗೆ ವೈಕುಂಠ ದ್ವಾರ ಪ್ರವೇಶ, ಭಕ್ತರಿಗೆ ಸಮರ್ಪಣೆ ಆಗಲಿದೆ ಎಂದರು.

ಡಿ.29 ರ ಸೋಮವಾರದಂದು ಸಂಜೆ 6.30 ಗಂಟೆಗೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಆಭರಣ ಹಾಗೂ ಹೂವಿನ ಆಲಂಕಾರ ಆಯೋಜಿಸಲಾವುದು, ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಆರಂಭವಾಗುವ ಸುಪ್ರಭಾತ ಸೇವೆ, 4.30 ಕ್ಕೆ ನಿತ್ಯ ಆರಾಧನೆ, 5 ಗಂಟೆಗೆ ವೈಕುಂಠ ದ್ವಾರ ಪೂಜೆ ನಂತರ ಮಹಾ ಮಂಗಳಾರತಿ ಹಾಗೂ ಫಲಾಮೃತವನ್ನು ಭಕ್ತಾಧಿಗಳಿಗೆ ವಿತರಿಸಲಾಗುವುದು ಎಂದರು.

ವೈಕುಂಠ ಏಕಾದಶಿಯ ವಿಶೇಷಪೂಜೆಗೆ ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಘದ ಪೀಠಾಧಿಪತಿ ಶ್ರೀನಿಶ್ಚಲಾನಂದ ಸ್ವಾಮೀಜಿ ದಿವ್ಯಾ ಸಾನಿಧ್ಯದಲ್ಲಿ ಮೇಲುಕೋಟೆಯ ಆಗಮ ಪ್ರವೀಣ ಡಾ.ಸೆಲ್ವಪಿಳ್ಳೇ ಅಯ್ಯಂಗಾರ್, ದೇವಾಲಯದ ಅರ್ಚಕ ಅನಂತ ಕೃಷ್ಣಭಟರ್, ನರಸಿಂಹಭಟ್, ವಾಸ್ತು ಪ್ರವೀಣ ಯು.ವಿ.ಗಿರೀಶ್ ಆಗಮಿಸಲಿದ್ದಾರೆಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಾದ್ಯಗೋಷ್ಠಿ, ಭಜನೆ, ಭರತ ನಾಟ್ಯ, ಭಕ್ತಿಗೀತಾ ಪ್ರವಚನ ಹಾಗೂ ಶ್ರೀನಿವಾಸ ಕಲ್ಯಾಣ ಪೌರಾಣಿಕ ನಾಟಕ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುಮಾರು 25 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರಿಗೆ ಕಜ್ಜಾಯ, ಬಾಳೆಹಣ್ಣು ಹಾಗೂ ಹಾಲಿನ ಫಲಾಮೃತ ವಿತರಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ನಾಗಪ್ಪ, ಟ್ರಸ್ಟಿಗಳಾದ ಶ್ರೀನಿವಾಸ್, ತಿಮ್ಮರಾಜು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ