ಮಂಡ್ಯ ವಿಧಾನಸಭಾ ಕ್ಷೇತ್ರದ ವಾಪ್ತಿಯ ಮಂಡ್ಯನಗರದ ಕಾರಿಮನೆ ಗೇಟ್ ಬಳಿ ತಡೆಗೋಡೆ ನಿರ್ಮಿಸುವ ಹಾಗೂ ರಸ್ತೆ ಅಭಿವೃದ್ದಿಪಡಿಸುವ 8.10 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಶುಕ್ರವಾರ ಚಾಲನೆ ನೀಡಿದರು.
ಮಂಡ್ಯ ನಗರದ ಕಾರಿಮನೆ ಗೇಟ್ ಹತ್ತಿರ 1 ಮತ್ತು 2 ವಾರ್ಡ್ ಮಧ್ಯದಲ್ಲಿ ಸಾಗಿ ಹೋಗಿರುವ ನಾಲೆಯಿಂದ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಇಲ್ಲಿನ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದರು. ಇದನ್ನು ಮನಗೊಂಡ ಶಾಸಕರು ತಡೆಗೋಡೆ ನಿರ್ಮಾಣ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಇದಲ್ಲದ ಮಂಡ್ಯ- ನಾಗಮಂಗಲ ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ಹೋಗುವ ಅಚ್ಚುಕಟ್ಟು ರಸ್ತೆಯ ಅಭಿವೃದ್ಧಿ ಸೇರಿದಂತೆ ಎರಡು ಕಾಮಗಾರಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡಿಯಾಗಿದ್ದು, ಭೂಮಿ ಪೂಜೆ ನೆರವೇರಿಸಿದರು.
ಇದಲ್ಲದೇ 30 ಲಕ್ಷ ಚಂದಗಾಲು ಗ್ರಾಮ ಪರಿಮಿತಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 2 ಕೋಟಿ 80 ಲಕ್ಷ ವೆಚ್ಚದ ಕೌಡ್ಲೆ ಉಪಶಾಖಾ ನಾಲೆ ಅರಿಶಿಣಗೆರೆ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಚಂದಗಾಲು ಗ್ರಾಮ ಹಾಗೂ ಅರಿಶಿಣಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು.




