Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | 8.10 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಮಂಡ್ಯ ವಿಧಾನಸಭಾ ಕ್ಷೇತ್ರದ ವಾಪ್ತಿಯ ಮಂಡ್ಯನಗರದ ಕಾರಿಮನೆ ಗೇಟ್ ಬಳಿ ತಡೆಗೋಡೆ ನಿರ್ಮಿಸುವ ಹಾಗೂ ರಸ್ತೆ ಅಭಿವೃದ್ದಿಪಡಿಸುವ 8.10 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಶುಕ್ರವಾರ ಚಾಲನೆ ನೀಡಿದರು.

ಮಂಡ್ಯ ನಗರದ ಕಾರಿಮನೆ ಗೇಟ್ ಹತ್ತಿರ 1 ಮತ್ತು 2 ವಾರ್ಡ್ ಮಧ್ಯದಲ್ಲಿ ಸಾಗಿ ಹೋಗಿರುವ ನಾಲೆಯಿಂದ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಇಲ್ಲಿನ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದರು. ಇದನ್ನು ಮನಗೊಂಡ ಶಾಸಕರು ತಡೆಗೋಡೆ ನಿರ್ಮಾಣ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಇದಲ್ಲದ ಮಂಡ್ಯ- ನಾಗಮಂಗಲ ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ಹೋಗುವ ಅಚ್ಚುಕಟ್ಟು ರಸ್ತೆಯ ಅಭಿವೃದ್ಧಿ ಸೇರಿದಂತೆ ಎರಡು ಕಾಮಗಾರಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡಿಯಾಗಿದ್ದು, ಭೂಮಿ ಪೂಜೆ ನೆರವೇರಿಸಿದರು.

ಇದಲ್ಲದೇ 30 ಲಕ್ಷ ಚಂದಗಾಲು ಗ್ರಾಮ ಪರಿಮಿತಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 2 ಕೋಟಿ 80 ಲಕ್ಷ ವೆಚ್ಚದ ಕೌಡ್ಲೆ ಉಪಶಾಖಾ ನಾಲೆ ಅರಿಶಿಣಗೆರೆ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಚಂದಗಾಲು ಗ್ರಾಮ ಹಾಗೂ ಅರಿಶಿಣಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ