Friday, November 20, 2026

ಪ್ರಾಯೋಗಿಕ ಆವೃತ್ತಿ

ಮಲ್ಟಿಮೀಡಿಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಗತ್ಯ : ನರೇಂದ್ರಸ್ವಾಮಿ

ದೇಶದ ಅಭಿವೃದ್ಧಿಗೆ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಲ್ಟಿಮೀಡಿಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು

ಮಳವಳ್ಳಿ ಪಟ್ಟಣದಲ್ಲಿ ಟಯೋಟ ಕಿಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ತಾಲೂಕಿನ 37 ಸರ್ಕಾರಿ ಶಾಲೆಗಳಲ್ಲಿ ಮಲ್ಟಿ ಮೀಡಿಯಾ ಪ್ರಸಾರ ಮತ್ತು ಸ್ವೀಕೃತಿ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣದಲ್ಲಿ ಮಲ್ಟಿಮೀಡಿಯಾವು ಮಾಹಿತಿಗಳನ್ನು ದೃಶ್ಯ, ಶ್ರವಣ ಮತ್ತು ಲಿಖಿತ ರೂಪಗಳಲ್ಲಿ ಏಕಕಾಲದಲ್ಲಿ ಪ್ರಸ್ತುತಪಡಿಸುವ ಮೂಲಕ ಕಲಿಕೆಯನ್ನು ಆಳವಾಗಿಸುತ್ತದೆ, ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಮತ್ತು ನೈಜ-ಜೀವನದ ಸನ್ನಿವೇಶಗಳನ್ನು ಅನುಕರಿಸಿ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ ಎಂದರು.

ಮಲ್ಟಿಮೀಡಿಯಾವು ಆಧುನಿಕ ಶಿಕ್ಷಣದ ಮೂಲಾಧಾರವಾಗಿದೆ, ಇದು ಕಲಿಕೆಯನ್ನು ಹೆಚ್ಚು ಪರಿಣಾಮಕಾರಿ, ಆಕರ್ಷಕ ಮತ್ತು ಪ್ರಸ್ತುತಪಡಿಸುತ್ತದೆ, ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಪಡಿಸುತ್ತದೆ.ಯಾವುದೇ ವಿಷಯವನ್ನು ಯಾವುದೇ ಸಮಯದಲ್ಲಿ ಕಲಿಯಲು ಅವಕಾಶ ನೀಡುತ್ತದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಹೇಳಿದರು.

ಬೋಧನೆಯಲ್ಲಿ ಸರಳತೆ, ಗುಣಮಟ್ಟ ಹೆಚ್ಚಳ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದು ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗೆ ಪೂರಕವಾಗಿ ಹೊಸ ಆಲೋಚನೆ ಹಾಗೂ ಅನ್ವೇಷಣೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಎಂದರು.

ಟೊಯೋಟಾ ಸಂಸ್ಥೆ ಉಪಾಧ್ಯಕ್ಷ ರಮೇಶ್ ರಾವ್. ವ್ಯವಸ್ಥಾಪಕರಾದ ಕಿರಣ್. ಮಗೇಶ್. ಈಶ್ವರ್ . ತಹಸಿಲ್ದಾರ್ ಲೋಕೇಶ್. ಇ ಓ ಶ್ರೀನಿವಾಸ್. ಬಿ ಇ ಓ ಉಮಾ. ಎಸ್ ಟಿ ಎಂ ಸಿ ಅಧ್ಯಕ್ಷ ಪ್ರಕಾಶ್ .ಉಪಾಧ್ಯಕ್ಷ ಕವಿತಾ. ಟಿ ಎ ಪಿ ಸಿ ಎಂ ಸಿ ಅಧ್ಯಕ್ಷ ಲಿಂಗರಾಜು ಮುಖ್ಯ ಉಪಾಧ್ಯಾಯರಾದ ಶಿವರಾಜು ಕುಮಾರ್ ಸೇರಿದಂತೆ ಇತರರು ಇದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ