Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಆಟೋರಿಕ್ಷಾ ಪ್ರಯಾಣ ದರ ಹೆಚ್ಚಳ : ಏರಿಕೆಯಾಗಿದ್ದು ಎಷ್ಟು ಗೊತ್ತಾ ?

ಕಳೆದ ಏಳು ವರ್ಷಗಳಿಂದ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಣೆಯಾಗದ ಹಿನ್ನಲೆಯಲ್ಲಿ ಹಾಗೂ ಎಲ್.ಪಿ.ಜಿ./ಪೆಟ್ರೋಲ್/ಡೀಸಲ್ ದರಗಳಲ್ಲಿ ಮತ್ತು ವಾಹನಗಳ ನಿರ್ವಹಣೆ ಮತ್ತು ಇತರೆ ವೆಚ್ಚಗಳಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವುದನ್ನು ಪರಿಗಣಿಸಿ ಸಾರ್ವಜನಿಕರ ಮತ್ತು ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಹಿತದೃಷ್ಟಿಯಿಂದ ಆಟೋ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ಆಟೋ ಪ್ರಯಾಣದ ಕನಿಷ್ಠ ಮೊದಲ 1.9 ಕಿ.ಮೀ.ಗೆ 2017 ರಲ್ಲಿ ರೂ 25 ಅನ್ನು ನಿಗದಿಪಡಿಸಲಾಗಿತ್ತು. ಪ್ರಸ್ತುತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರೂ 5 ಅನ್ನು ಹೆಚ್ಚಿಸಿದೆ ಆಟೋ ಪ್ರಯಾಣದ ಕನಿಷ್ಠ ಮೊದಲ 1.9 ಕಿ.ಮೀ.ಗೆ ರೂ 30 ಅನ್ನು ಪಾವತಿಸಬೇಕಾಗಿದೆ ಎಂದು ಹೇಳಿದರು.

1.9 ಕಿ.ಮೀ ನಂತರದ ಪ್ರತಿ ಕಿ.ಮೀಗೆ ಕಾಯುವ ದರ ಮೊದಲು ರೂ 13 ಇತ್ತು, ಈಗ ಎರಡು ರೂಪಾಯಿಯನ್ನು ಹೆಚ್ಚಿಸಲಾಗಿದೆ, 5 ನಿಮಿಷ 1.9 ಕಿ.ಮೀ ನಂತರದ ಪ್ರತಿ ಕಿ.ಮೀ ಗೆ ರೂ 15 ಅನ್ನು ಪಾವತಿಸಬೇಕು. ಮೊದಲು 5 ನಿಮಿಷಗಳ ಕಾಯುವ ದರವನ್ನು ಮೊದಲಿನಂತೆ ಉಚಿತ ಮಾಡಲಾಗಿದೆ ಎಂದು ಹೇಳಿದರು.

ಕಾಯುವಿಕೆಯ ನಂತರದ ಪ್ರತಿ 15 ನಿಮಿಷ ಅಥವಾ ಅದರ ಅರ್ಥ ಭಾಗಕ್ಕೆ ಮುಂಚಿನಂತೆಯೆ ರೂ 5 ಅನ್ನು ನಿಗದಿಪಡಿಸಲಾಗಿದೆ. ಲಗ್ಗೇಜು ದರವನ್ನು ಮೊದಲ 20 ಕೆ.ಜಿ ವರೆಗೆ ಉಚಿತವಾಗಿ ನೀಡಲಾಗುತ್ತದೆ. 20 ಕೆ.ಜಿ ಅಥವಾ ಹೆಚ್ಚಿನ ತೂಕದ ಲಗ್ಗೇಜಿಗೆ ಮೊದಲಿಗಿಂತ ರೂ 3 ಅನ್ನು ಹೆಚ್ಚಿಸಲಾಗಿದ್ದು 20 ಕೆ.ಜಿ ಗಿಂತ ಅಧಿಕ ತೂಕದ ಲಗ್ಗೇಜಿಗೆ ರೂ 5 ಪಾವತಿಸಬೇಕಾಗಿರುತ್ತದೆ. ಲಗ್ಗೇಜು ತೂಕದ ಗರಿಷ್ಠ ತೂಕವನ್ನು ಮೊದಲಿನಂತೆಯೇ 50 ಕೆ.ಜಿ ಗೆ ಮಿತಿ ಗೊಳಿಸಲಾಗಿದೆ ಎಂದು ಹೇಳಿದರು.

ರಾತ್ರಿ ವೇಳೆ ಆಟೋ ಪ್ರಯಾಣ ದರವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಗಳವರೆಗೆ ಮೊದಲಿನಂತೆ ಸಾಮಾನ್ಯ ದರ ಅರ್ಧದಷ್ಟು ಹೆಚ್ಚು ಪಾವತಿಸಬೇಕು. ಆಟೋ ಚಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿರುವ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಾಮಾಣಿಕರ ಬಳಿ ಕೇಳುವಂತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಸೇರಿದಂತೆ ಅಧಿಕಾರಿಗಳು ಮತ್ತು ಆಟೋ ಚಾಲಕರ ಸಂಘ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ