ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೇ ಡಿಜಿಪಿ ರಾಮಚಂದ್ರರಾವ್ ಏಕಾಏಕಿ ಅಮಾನತು ಮಾಡಿರುವುದು ರಾಜ್ಯ ಸರಕಾರ ದಲಿತ ವಿರೋಧಿ ನಡೆಯಾಗಿದೆ ಎಂದು ಛಲವಾದಿ ಮಹಾಸಭಾದ ಮಳವಳ್ಳಿ ತಾಲೂಕು ಅಧ್ಯಕ್ಷ ಎಂ.ಬಿ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಚಂದ್ರರಾವ್ ಪೊಲೀಸ್ ಇಲಾಖೆಯ ಉತ್ತನ ಅಧಿಕಾರಿಯಾಗಿದ್ದಾರೆ. ಅವರ ವಿರುದ್ಧದ ಆರೋಪಕ್ಕೆ ಪ್ರಾಥಮಿಕ ತನಿಖೆ ನಡೆಸದೇ ಅಥವಾ ಯಾವುದೇ ವರದಿಗೆ ಕಾಯದೇ ಅಮಾನತು ಮಾಡಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ವಿಡಿಯೋ ಹಾಗೂ ಆಡಿಯೋಗಳನ್ನ ಆಧಾರದ ಮೇಲೆ ರಾಮಚಂದ್ರರಾವ್ ಅಮಾನತು ಮಾಡಲಾಗಿದೆ. ಆದರೆ ರಾಮಚಂದ್ರರಾವ್ ಅವರು ಇದರಲ್ಲಿ ಕೃತಕ ಬುದ್ಧಿಮತೆ(ಎಐ) ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಿ ಅವರನ್ನು ಅಮಾನತು ಮಾಡದೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದಿತ್ತು ಎಂದು ಅಭಿಪ್ರಾಯ ಪಟ್ಟರು.
ಈ ಸಂಬಂಧ ರಾಜ್ಯದ ದಲಿತರಿಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ರಾಜ್ಯಪಾಲರು ನಿರ್ಲಕ್ಷ್ಯ ತೋರಿದರೆ ದಲಿತಪರ ಸಂಘಟನೆಗಳು, ಛಲವಾದಿ ಮಹಾಸಭಾ, ಕರ್ನಾಟಕ ಬಂಜಾರ ಬ್ರಿಗೇಡ್ ಹಾಗೂ ಕನ್ನಡಪರ ಹೊರಾಟಗಾರರು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.




