Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೇಂದ್ರ ಬಜೆಟ್ | ಕೃಷಿಯಾಧಾರಿತ ಕರ್ನಾಟಕ ರಾಜ್ಯಕ್ಕಿಲ್ಲ ಒತ್ತು : ಚಲುವರಾಯಸ್ವಾಮಿ

ಶೇಕಡ 60 ರಷ್ಟು ಕರ್ನಾಟಕ ಕೃಷಿಯಾಧಾರಿತ ರಾಜ್ಯವಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ ಕೇಂದ್ರ ಬಜೆಟ್ ಅನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದ್ದಾರೆ.

ರಾಜ್ಯಕ್ಕೆ ಇದೊಂದು ನಿರಾಶದಾಯಕ ಬಜೆಟ್ ಆಗಿದೆ. ರಾಜ್ಯದ 19 ಸಂಸದರಿದ್ದು, ಮೂವರು ಮಂತ್ರಿಗಳಿದ್ದಾರೆ. ಬಿಜೆಪಿ ಸಂಸದರು, ಮಂತ್ರಿಗಳು ಒತ್ತಡ ಹಾಕಿ ರಾಜ್ಯಕ್ಕೆ ಯೋಜನೆ ತರಲು ಮುಂದಾಗಬೇಕಿತ್ತು. ಅದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದಿದ್ದಾರೆ.

ರೈತ, ಜನರ ವಿರೋಧಿ ಬಜೆಟ್ ಆಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿ ತನ್ನದೇ ಬೆನ್ನು ತಟ್ಟಿಕೊಳ್ಳುತ್ತಿದೆ. ಇದರಲ್ಲಿ ಜನರಿಗೆ ಅನುಕೂಲವಾಗುವಂಥ ಯಾವುದೇ ಯೋಜನೆಗಳಿಲ್ಲ ಎಂಬು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ